ಪತ್ರಕರ್ತರ ವಿರುದ್ಧ ತ್ರಿಪುರಾ ಪೊಲೀಸರು ದಾಖಲಿಸಿದ ಎಫ್ಐಆರ್ ಗೆ ಸುಪ್ರೀಂ ತಡೆ

Prasthutha|

ನವದೆಹಲಿ: ಕೋಮು ಸೌಹಾರ್ದತೆ ಕದಡಿದ ಆರೋಪದಡಿ ತ್ರಿಪುರ ಪೊಲೀಸರು ಇಬ್ಬರು ಪತ್ರಕರ್ತರ ವಿರುದ್ಧ ದಾಖಲಿಸಿರುವ ಎಫ್ಐಆರ್ಗೆ ಸುಪ್ರೀಂಕೋರ್ಟ್ ಬುಧವಾರ ತಡೆ ನೀಡಿದೆ.

- Advertisement -

ಎಫ್ ಐಆರ್ ರದ್ದುಗೊಳಿಸುವಂತೆ ಕೋರಿ ಇಬ್ಬರು ಪತ್ರಕರ್ತೆಯರು ಹಾಗೂ ಎಚ್ ಡಬ್ಲ್ಯೂ ನ್ಯೂಸ್ ಇಂಗ್ಲಿಷ್ ಸುದ್ದಿವಾಹಿನಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಡಿ. ವೈ ಚಂದ್ರಚೂಡ್ ನೇತೃತ್ವದ ಸುಪ್ರೀಂಕೋರ್ಟ್ ಪೀಠ ಬುಧವಾರ ನಡೆಸಿ, ಎಫ್ಐಆರ್ ಗೆ ತಡೆ ನೀಡಿ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ.

ಕ್ರಿಮಿನಲ್ ಪಿತೂರಿ ಸೇರಿದಂತೆ ವಿವಿಧ ಆರೋಪಗಳಡಿ ತ್ರಿಪುರಾದಲ್ಲಿ ಬಂಧಿತರಾಗಿದ್ದ ದೆಹಲಿ ಮೂಲದ ಇಬ್ಬರು ಮಹಿಳಾ ಪತ್ರಕರ್ತರಾದ ಸಮೃದ್ಧಿ ಕೆ ಸಕುನಿಯಾ ಮತ್ತು ಸ್ವರ್ಣಾ ಝಾ ಅವರಿಗೆ ಸ್ಥಳೀಯ ಗೋಮತಿ ಜಿಲ್ಲಾ ಚೀಫ್ ಜ್ಯೂಡಿಷಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್ ಇತ್ತೀಚೆಗೆ ಜಾಮೀನು ನೀಡಿತ್ತು.

- Advertisement -

ರಾಜ್ಯದ ಮಸೀದಿಯೊಂದರಲ್ಲಿ ನಡೆದ ವಿಧ್ವಂಸಕ ಕೃತ್ಯದ ಕುರಿತು ವರದಿ ಮಾಡಿದ್ದಕ್ಕಾಗಿ ಈ ಇಬ್ಬರೂ ಮಹಿಳಾ ಪತ್ರಕರ್ತರನ್ನು ಬಂಧಿಸಲಾಗಿತ್ತು. ಎಚ್ ಡಬ್ಲ್ಯೂ ನ್ಯೂಸ್ ನೆಟ್ವರ್ಕ್ ಗಾಗಿ ಕೆಲಸ ಮಾಡುವ ಈ ಪತ್ರಕರ್ತರು ತ್ರಿಪುರಾದಲ್ಲಿ ಇತ್ತೀಚಿನ ಹಿಂಸಾಚಾರವನ್ನು ವರದಿ ಮಾಡುತ್ತಿದ್ದರು. ತಮ್ಮ ವಿರುದ್ಧ ದಾಖಲಾಗಿರುವ ಎಫ್ ಐಆರ್ ರದ್ದುಗೊಳಿಸುವಂತೆ ಅವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.

Join Whatsapp