ಟೋಕಿಯೊ ಪ್ಯಾರಾಲಿಂಪಿಕ್ಸ್| ಶೂಟರ್ ನರೇಶ್ ಕುಮಾರ್ ಶರ್ಮಾರಿಗೆ ಸುಪ್ರೀಮ್ ಗ್ರೀನ್ ಸಿಗ್ನಲ್

Prasthutha|

ಹೊಸದಿಲ್ಲಿ: ಐದು ಬಾರಿ ಪ್ಯಾರಾಲಿಂಪಿಕ್ಸ್ ನಲ್ಲಿ ಭಾಗವಹಿಸಿದ್ದ ಶೂಟರ್ ನರೇಶ್ ಕುಮಾರ್ ಶರ್ಮಾರನ್ನು ಮುಂಬರುವ ಟೋಕಿಯೊ ಪ್ಯಾರಾಲಿಂಪಿಕ್ಸ್ ಗೆ ಹೆಚ್ಚುವರಿ ಆಟಗಾರನಾಗಿ ಆಡಲು ಅವಕಾಶ ನೀಡುವಂತೆ ಆಡಳಿತ ಮಂಡಳಿಗೆ ಇಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.

- Advertisement -

ಆಗಸ್ಟ್ 24ರಿಂದ ಆರಂಭವಾಗಲಿರುವ ಟೋಕಿಯೊ ಪ್ಯಾರಾಲಿಂಪಿಕ್ಸ್ ಗೆ ತನ್ನನ್ನು ಆಯ್ಕೆ ಮಾಡದ ಹಿನ್ನೆಲೆಯಲ್ಲಿ ಶೂಟರ್ ನರೇಶ್ ಕುಮಾರ್ ಸುಪ್ರೀಮ್ ಕೋರ್ಟ್ ಮೆಟ್ಟಿಲೇರಿದ್ದರು. 

ಭಾರತೀಯ ಪ್ಯಾರಾಲಿಂಪಿಕ್ ಸಮಿತಿ(ಪಿಸಿಐ) ಯಲ್ಲಿ ಪಕ್ಷಪಾತ ದೋರಣೆಯನ್ನು ಉಲ್ಲೇಖಿಸಿ ಪ್ಯಾರಾಲಿಂಪಿಕ್ಸ್ ಗೆ ತನ್ನ ಹೆಸರನ್ನು ಸೇರಿಸುವಂತೆ ಕೋರಿ ಅರ್ಜುನ ಪ್ರಶಸ್ತಿ ವಿಜೇತ ನರೇಶ್ ಸಲ್ಲಿಸಿದ್ದ ಅರ್ಜಿಯನ್ನು ಇಂದು ನ್ಯಾಯಾಲಯ ವಿಚಾರಣೆ ನಡೆಸಿತ್ತು.

- Advertisement -

ಸುಪ್ರೀಮ್ ಕೋರ್ಟ್ ನ ಈ ಆದೇಶವನ್ನು ಕೇಂದ್ರ ಸರ್ಕಾರ ಸ್ವಾಗತಿಸಿದೆ. ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಶೂಟಿಂಗ್ ಗಾಗಿ ಆಯ್ಕೆಯಾಗಲು ಇಂದು ಕೊನೆಯ ದಿನಾಂಕವಾಗಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಮ್ ಕೋರ್ಟ್ ನ ಆದೇಶ ಮಹತ್ವ ಪಡೆದಿದೆ.

Join Whatsapp