ಭಾರತೀಯ ಪರಿಸರ ಸೇವೆ ನಿರ್ಮಾಣ । ಕೇಂದ್ರಕ್ಕೆ ಸುಪ್ರೀಮ್ ಕೋರ್ಟ್ ನೋಟಿಸ್

Prasthutha|

ನವದೆಹಲಿ: ತಳಮಟ್ಟದಲ್ಲಿ ಪರಿಸರ ಸಂರಕ್ಷಣೆಗಾಗಿ ಅಖಿಲ ಭಾರತ ಸೇವಾ ಮಾದರಿಯಲ್ಲಿ ಪರಿಸರ ಸೇವೆಯನ್ನು ನಿರ್ಮಿಸುವ ಕುರಿತು ಸುಪ್ರೀಮ್ ಕೋರ್ಟ್ ಗೆ ಸಲ್ಲಿಸಲಾದ ಅರ್ಜಿಯ ಕುರಿತು ಪ್ರತಿಕ್ರಿಯಿಸುವಂತೆ ಕೇಂದ್ರ ಸರ್ಕಾರ ನೋಟಿಸ್ ನೀಡಿದೆ.

- Advertisement -

ನ್ಯಾಯಮೂರ್ತಿಗಳಾದ ಎಸ್.ಕೆ ಕೌಲ್, ಎಂ ಎಂ ಸುಂದ್ರೇಶ್ ಅವರನ್ನೊಳಗೊಂಡ ಪೀಠ ಕೇಂದ್ರ ಪರಿಸರ ಸಚಿವಾಲಯಕ್ಕೆ ನೋಟಿಸ್ ಜಾರಿ ಮಾಡಿದೆ.

ಮಾತ್ರವಲ್ಲ ಅಖಿಲ ಭಾರತ ಸೇವೆಯನ್ನು ಪ್ರತ್ಯೇಕವಾಗಿ ನಿರ್ಮಿಸಲು ಆದೇಶ ಹೊರಡಿಸಬಹುದೇ ಎಂಬ ಅನುಮಾನವನ್ನು ಸುಪ್ರೀಮ್ ಕೋರ್ಟ್ ವ್ಯಕ್ತಪಡಿಸಿದೆ.

- Advertisement -

ಅದಾಗ್ಯೂ ಮಾಜಿ ಕ್ಯಾಬಿನೆಟ್ ಕಾರ್ಯದರ್ಶಿ ನೇತೃತ್ವದ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತರಲು ಕೇಂದ್ರ ಉದ್ದೇಶಿಸಿದೆಯೇ ಎಂಬುವುದರ ಬಗ್ಗೆ ತನಿಖೆ ನಡೆಸಬಹುದು ಎಂದು ಸುಪ್ರೀಮ್ ಕೋರ್ಟ್ ಸೂಚಿಸಿದೆ.

2014 ರಲ್ಲಿ ಮಾಜಿ ಕ್ಯಾಬಿನೆಟ್ ಕಾರ್ಯದರ್ಶಿ ಟಿಎಸ್ಆರ್ ಸುಬ್ರಮಣಿಯನ್ ಅವರ ಅಧ್ಯಕ್ಷತೆಯಲ್ಲಿ ಪರಿಸರ ಮತ್ತು ಅರಣ್ಯ ಸಚಿವಾಲಯ ರಚಿಸಿದ್ದ ಉನ್ನತ ಮಟ್ಟದ ಸಮಿತಿಯು 2014 ರಲ್ಲಿ ರಚಿಸುವಂತೆ ಶಿಫಾರಸು ಮಾಡಿದ ವರದಿಯನ್ನು ಉಲ್ಲೇಖಿಸಿ ವಕೀಲ ಸಮರ್ ವಿಜಯ್ ಸಿಂಗ್ ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.

ಅರ್ಜಿದಾರರ ಪರ ಹಿರಿಯ ವಕೀಲ ಕೆ ಸುಲ್ತಾನ್ ಸಿಂಗ್ ವಾದ ಮಂಡಿಸಿದ್ದರು.



Join Whatsapp