RSS ಪಥಸಂಚಲನಕ್ಕೆ ನೀಡಿದ್ದ ಅನುಮತಿ ಪ್ರಶ್ನಿಸಿದ್ದ ತಮಿಳುನಾಡು ಸರ್ಕಾರದ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್

Prasthutha|

ನವದೆಹಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘ-RSSಗೆ ಪಥಸಂಚಲನ ಕೈಗೊಳ್ಳಲು ಮದ್ರಾಸ್ ಹೈಕೋರ್ಟ್ ನೀಡಿದ್ದ ಅನುಮತಿಯನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ತಿರಸ್ಕರಿಸಿದೆ.

- Advertisement -

2022 ರ ನವೆಂಬರ್ 4 ರಂದು ಏಕಸದಸ್ಯ ಪೀಠವು ಆರೆಸ್ಸೆಸ್’ಗೆ “ಮೈದಾನ ಅಥವಾ ಕ್ರೀಡಾಂಗಣದಂತಹ ಸಂಯೋಜಿತ ಆವರಣದಲ್ಲಿ ಮೆರವಣಿಗೆ ಆಯೋಜಿಸುವಂತೆ ಸೂಚಿಸಿದ್ದ ಏಕಸದಸ್ಯ ಪೀಠದ ಆದೇಶವನ್ನು ಹೈಕೋರ್ಟ್ ವಿಭಾಗೀಯ ಪೀಠವು ಫೆಬ್ರವರಿ 10 ರಂದು ರದ್ದುಗೊಳಿಸಿದ ನಂತರ ಡಿಎಂಕೆ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.

ಆರೆಸ್ಸೆಸ್ ನಡೆಸುವ ಮಾರ್ಚ್ ಗಳಿಗೆ ಮದರಾಸು ಹೈಕೋರ್ಟ್ ಅಸ್ತು ಎಂದು ಹೇಳಿದುದನ್ನು ಸುಪ್ರೀಂ ಕೋರ್ಟಿನಲ್ಲಿ ತಮಿಳುನಾಡು ಸರಕಾರ ಪ್ರಶ್ನಿಸಿತ್ತು. ಈಗ ಸುಪ್ರಿಂಕೋರ್ಟ್ ಕೂಡ ಹೈಕೋರ್ಟ್ ಆದೇಶ ಸರಿ ಇದೆ, ಮಾರ್ಚ್ ನಡೆಸಲಿ ಎಂದು ಹೇಳಿದೆ

- Advertisement -

ತಮಿಳುನಾಡಿನ ಎಂ. ಕೆ. ಸ್ಟಾಲಿನ್ ಸರಕಾರದ ಮನವಿಯನ್ನು ಪುರಸ್ಕರಿಸದ ಸರ್ವೋಚ್ಚ ನ್ಯಾಯಾಲಯವು ತಮಿಳುನಾಡಿನಲ್ಲಿ ಆರ್ ಎಸ್ ಎಸ್ –ರಾಷ್ಟ್ರೀಯ ಸ್ವಯಂಸೇವಕ ಸಂಘವು ಜಾಥಾಗಳನ್ನು ನಡೆಸುವುದಕ್ಕೆ ಸ್ವತಂತ್ರರು ಎಂದು ಹೇಳಿದೆ.

ತಮಿಳುನಾಡಿನಲ್ಲಿ ಆರೆಸ್ಸೆಸ್ ಜಾಥಾಗಳು ಹಿಂದಿ ಮಾತನಾಡುವ ಕಾರ್ಮಿಕರಲ್ಲಿ ಭಯ ಬಿತ್ತಿದೆ ಎಂಬ ಗಾಳಿ ಸುದ್ದಿಯೂ ಜೋರಿತ್ತು.  

2022ರ ಗಾಂಧಿ ಜಯಂತಿ ದಿನದಂದು ಸ್ವಾತಂತ್ರ್ಯದ ಅಮೃತ ಮಹೋತ್ಸವ ಮಾರ್ಚ್ ನಡೆಸಲು ಆರೆಸ್ಸೆಸ್ ತಯಾರಿ ನಡೆಸಿತ್ತು. ಆದರೆ ತಮಿಳುನಾಡು ಸರಕಾರ ಅನುಮತಿ ನೀಡಿರಲಿಲ್ಲ.

ಆಗ ಆರೆಸ್ಸೆಸ್ ಹೈ ಕೋರ್ಟು ಮೆಟ್ಟಿಲೇರಿತ್ತು.

ಒಳಾವರಣದಲ್ಲಿ ಇಲ್ಲವೇ, ಗೋಡೆಗಳ ರಕ್ಷಣೆಯ ಆವರಣದಲ್ಲಿ ಮಾರ್ಚ್ ನಡೆಸುವ ಷರತ್ತಿನೊಡನೆ ಏಕ ನ್ಯಾಯಾಧೀಶರಿದ್ದ ಹೈಕೋರ್ಟ್ ಪೀಠವು ಆರೆಸ್ಸೆಸ್ ಗೆ ನವೆಂಬರ್ ನಲ್ಲಿ ಅನುಮತಿ ನೀಡಿತ್ತು.

ಮತ್ತೊಂದು ಒಂಟಿ ನ್ಯಾಯಾಧೀಶರ ಹೈಕೋರ್ಟ್ ಪೀಠವು ಈ ಷರತ್ತುಗಳೆಲ್ಲ ಪ್ರಜಾಪ್ರಭುತ್ವಕ್ಕೆ ತಕ್ಕುದಲ್ಲ, ಆರೆಸ್ಸೆಸ್ ಮುಕ್ತವಾಗಿ ಮಾರ್ಚ್ ನಡೆಸಲಿ ಎಂದು 2023ರ ಫೆಬ್ರವರಿಯಲ್ಲಿ ಹೇಳಿತ್ತು.

ಅದನ್ನು ಡಿಎಂಕೆ ಸರಕಾರವು ಸುಪ್ರೀಂಕೋರ್ಟ್ ದಲ್ಲಿ ಪ್ರಶ್ನಿಸಿತ್ತು; ಸುಪ್ರಿಂಕೋರ್ಟ್ ಕೂಡ ಇಂದು ಆರೆಸ್ಸೆಸ್ ಮಾರ್ಚ್ ಮಾಡಲಿ ಎಂದು ಏಪ್ರಿಲ್ ನಲ್ಲಿ ತೀರ್ಪು ನೀಡಿತು. 



Join Whatsapp