ಕೋವಿಡ್–19 ಲಸಿಕೆಯಿಂದ ಅಡ್ಡ ಪರಿಣಾಮ: ಪಿಐಎಲ್ ವಜಾಗೊಳಿಸಿದ ಸುಪ್ರೀಂ

Prasthutha|

ನವದೆಹಲಿ: ಕೋವಿಡ್–19 ಲಸಿಕೆಯಿಂದ ಜನರಿಗೆ ಸಾಕಷ್ಟು ಅಡ್ಡಪರಿಣಾಮಗಳಾಗಿವೆ. ಈ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಸಕ್ಷಮ ಪ್ರಾಧಿಕಾರಕ್ಕೆ ಆದೇಶಿಸಬೇಕು ಎಂದು ಸುಪ್ರೀಂ ಕೋರ್ಟ್ಗೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಜಾಗೊಂಡಿದೆ.

- Advertisement -


ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹಾಗೂ ಜೆ.ಬಿ.ಪಾರ್ದಿವಾಲ್ ಅವರಿದ್ದ ಪೀಠ ಈ ಪಿಐಎಲ್ನ್ನು ವಜಾಗೊಳಿಸಿತು.


ಈ ಅರ್ಜಿಯ ಪ್ರಯೋಜನ ಏನು? ಎಂದು ಪ್ರಶ್ನಿಸಿದ ಪೀಠ, ಲಸಿಕೆ ಪಡೆಯದಿದ್ದರೆ ಅದರ ಪರಿಣಾಮಗಳು ಏನು ಎಂಬುದನ್ನು ನೀವು ಬಲ್ಲಿರಾ? ನಾವು ನಿಮ್ಮನ್ನು ತರಾಟೆಗೆ ತೆಗೆದುಕೊಳ್ಳಲು ಬಯಸುವುದಿಲ್ಲ. ಆದರೆ, ಪ್ರಚಾರ ಪಡೆಯಲು ನೀವು ಇದನ್ನು ಸಲ್ಲಿಸಿದ್ದಿರಿ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.

- Advertisement -


ಪ್ರಿಯಾ ಮಿಶ್ರಾ ಹಾಗೂ ಇತರರು, ಕೋವಿಡ್–19 ಲಸಿಕೆ ಪಡೆದವರಿಗೆ ರಕ್ತ ಹೆಪ್ಪುಗಟ್ಟುವಿಕೆ ಅಂತಹ ಅಡ್ಡಪರಿಣಾಮಗಳಾಗುತ್ತಿವೆ ಎಂದು ಪಿಐಎಲ್ ಸಲ್ಲಿಸಿದ್ದರು.



Join Whatsapp