ಅನರ್ಹಗೊಂಡ ಸಂಸದ ಫೈಝಲ್ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ

Prasthutha|

ನವದೆಹಲಿ: ಲಕ್ಷದ್ವೀಪ ಸಂಸದ ಮುಹಮ್ಮದ್ ಫೈಝಲ್ ಅವರು ಲೋಕಸಭೆ ಕಲಾಪಕ್ಕೆ ಹಾಜರಾಗಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನಾಳೆ ವಿಚಾರಣೆಗೆ ಪಟ್ಟಿ ಮಾಡಲು ಸುಪ್ರೀಂ ಕೋರ್ಟ್ ಸಮ್ಮತಿಸಿದೆ.

- Advertisement -


ಕೊಲೆಯತ್ನ ಪ್ರಕರಣವೊಂದರಲ್ಲಿ ಲಕ್ಷದ್ವೀಪ ಸಂಸದ ಮುಹಮ್ಮದ್ ಫೈಝಲ್ ದೋಷಿ ಎಂದು ಘೋಷಿಸಿ ವಿಚಾರಣಾ ನ್ಯಾಯಾಲಯವು ನೀಡಿರುವ ತೀರ್ಪು ಮತ್ತು ಶಿಕ್ಷೆಯನ್ನು ಕೇರಳ ಹೈಕೋರ್ಟ್ ಅಮಾನತಿನಲ್ಲಿ ಇಟ್ಟಿರುವ ಹಿನ್ನೆಲೆಯಲ್ಲಿ ಫೈಝಲ್ ಸುಪ್ರೀಕೋರ್ಟ್’ಗೆ ಈ ಅರ್ಜಿ ಸಲ್ಲಿಸಿದ್ದಾರೆ.
2009ರ ಲೋಕಸಭಾ ಚುನಾವಣೆಯ ವೇಳೆ, ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ನಾಯಕ ಪಿ.ಎಮ್. ಸಯೀದ್ ರ ಅಳಿಯ ಪಡನಾತ್ ಸಾಲಿಹ್ ಅವರ ಕೊಲೆಯತ್ನ ಪ್ರಕರಣದಲ್ಲಿ ಫೈಝಲ್ ಮತ್ತು ಇತರ ನಾಲ್ವರು ದೋಷಿಗಳು ಎಂಬುದಾಗಿ ಕಾವರಟ್ಟಿ ಸೆಶನ್ಸ್ ನ್ಯಾಯಾಲಯವು ಜನವರಿ 11ರಂದು ತೀರ್ಪು ನೀಡಿತ್ತು.


ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕ ಫೈಝಲ್ ಮತ್ತು ಇತರ ನಾಲ್ವರು ದೋಷಿಗಳಿಗೆ ನ್ಯಾಯಾಲಯವು 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಿತ್ತು. ದೋಷಿ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಜನವರಿ 13ರಂದು ಸಂಸದ ಸ್ಥಾನದಿಂದ ಫೈಝಲ್ ಅವರನ್ನು ಅನರ್ಹಗೊಳಿಸಲಾಗಿತ್ತು.



Join Whatsapp