ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ನೀಡುತ್ತಿದ್ದ ಉಚಿತ ಕೊಡುಗೆಗಳ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದ ಸುಪ್ರೀಂ

Prasthutha|

ನವದೆಹಲಿ: ಚುನಾವಣಾ ಪ್ರಚಾರದ ವೇಳೆ ಸಾರ್ವಜನಿಕ ನಿಧಿಯಿಂದ ಉಚಿತ ಕೊಡುಗೆಗಳನ್ನು ವಿತರಿಸುವುದಾಗಿ ರಾಜಕೀಯ ಪಕ್ಷಗಳು ಭರವಸೆ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೋಮವಾರಕ್ಕೆ ಮುಂದೂಡಿದೆ.

- Advertisement -

ಶನಿವಾರದೊಳಗೆ ತಮ್ಮ ಸಲಹೆಯನ್ನು ಸಲ್ಲಿಸುವಂತೆ ಪಕ್ಷಗಳಿಗೆ ಸುಪ್ರೀಂ ಕೋರ್ಟ್ ಸೂಚಿಸಿದ್ದು, ಸಾರ್ವಜನಿಕ ಹಣವನ್ನು ಸರಿಯಾದ ರೀತಿಯಲ್ಲಿ ಖರ್ಚು ಮಾಡುವ ಬಗ್ಗೆ ಕಾಳಜಿ ವಹಿಸಲಾಗಿದೆ ಎಂದು ಹೇಳಿದೆ.

ಚುನಾವಣಾ ಚಿಹ್ನೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಮತ್ತು ಸಾರ್ವಜನಿಕ ನಿಧಿಯಿಂದ ವಿತರಿಸುವುದಾಗಿ ಭರವಸೆ ನೀಡಿದ ರಾಜಕೀಯ ಪಕ್ಷಗಳನ್ನು ನೋಂದಾಯಿಸಲು ನಿರ್ದೇಶಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಿತು

- Advertisement -

ಆಗಸ್ಟ್ 10 ರಂದು ಸುಪ್ರೀಂ ಕೋರ್ಟ್, ಚುನಾವಣಾ ಸಮಯದಲ್ಲಿ ರಾಜಕೀಯ ಪಕ್ಷಗಳು ಉಚಿತ ಕೊಡುಗೆಗಳನ್ನು ಭರವಸೆ ನೀಡುವುದು ಮತ್ತು ವಿತರಿಸುವುದು “ಗಂಭೀರ ವಿಷಯ” . ಅದನ್ನು ಜನರ ಕಲ್ಯಾಣಕ್ಕಾಗಿ  ಮೊತ್ತವನ್ನು ಖರ್ಚು ಮಾಡಬೇಕೆಂದು  ಆದೇಶಿಸಿತ್ತು.



Join Whatsapp