ಸ್ಟಾರ್ಟ್ ಅಪ್ ರಾಜಧಾನಿ ಬೆಂಗಳೂರಿನಲ್ಲಿ ನವೋದ್ಯಮಗಳಿಗಾಗಿ ಎಸ್.ಬಿ.ಐನಿಂದ ವಿಶೇಷ ಶಾಖೆ

Prasthutha|

ಬೆಂಗಳೂರು; ನವೋದ್ಯಮಗಳ ರಾಜಧಾನಿಯಾಗಿರುವ ಬೆಂಗಳೂರಿನಲ್ಲಿ ಸ್ಮಾರ್ಟ್-ಅಪ್ಗಳಿಗೆ ಸಹಾಯ ಹಸ್ತ ನೀಡಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ – ಎಸ್ ಬಿಐ ಸ್ಮಾರ್ಟ್-ಅಪ್ ಗಳಿಗಾಗಿ ಮೀಸಲಾದ ಅತ್ಯಾಧುನಿಕ ಶಾಖೆಯನ್ನು ಪ್ರಾರಂಭಿಸಲು ನಿರ್ಧರಿಸಿದೆ.

- Advertisement -

ಸ್ಮಾರ್ಟ್-ಅಪ್ ಗಳಿಗೆ ಅನುಕೂಲ ಮತ್ತು ಸಹಾಯ ಒದಗಿಸಲು ಇದರಿಂದ ನೆರವಾಗಲಿದ್ದು, ಇದು ಭಾರತದಲ್ಲೇ ವಿಶೇಷವಾದ ಶಾಖೆಯಾಗಲಿದೆ.

ಬ್ಯಾಂಕಿನ ಅಧ್ಯಕ್ಷ ದಿನೇಶ್ ಖಾರ ಅವರು ವಿನೂತನ ಶಾಖೆಯ ಸ್ವರೂಪದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

- Advertisement -

ಕೇಂದ್ರ ಸರ್ಕಾರ ತನ್ನ ಪ್ರಮುಖ ‘ಸ್ಮಾರ್ಟ್ಅಪ್ ಇಂಡಿಯಾ’ ಆಂದೋಲನದ ಮೂಲಕ ಸುಸ್ಥಿರ ಆರ್ಥಿಕ ಬೆಳವಣಿಗೆಗೆ ಚಾಲನೆ ನೀಡಿದೆ. ಯುವಸಮೂಹದ ಉದ್ಯಮಶೀಲತಾ ಕೌಶಲ್ಯಗಳಿಗೆ ಸಹಾಯಹಸ್ತ ನೀಡಲು ಮತ್ತು ದೊಡ್ಡ ಪ್ರಮಾಣದ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಇದರಿಂದ ಸಾಧ್ಯವಾಗಲಿದೆ. ಜೊತೆಗೆ ದೇಶದಲ್ಲಿ ಹೊಸ ಬದಲಾವಣೆ ತರಲು ಮತ್ತು ಸ್ಮಾರ್ಟ್-ಅಪ್ ಗಳನ್ನು ಪೋಷಿಸಲು ಬಲವಾದ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಗುರಿಯನ್ನು ಬ್ಯಾಂಕ್ ಹೊಂದಿದೆ ಎಂದರು.

ಎಸ್ ಬಿಐ ಆರಂಭಿಸಲಿರುವ ಸ್ಮಾರ್ಟ್-ಅಪ್ ಶಾಖೆಯು ಕೋರಮಂಗಲದಲ್ಲಿದೆ. ಇದರ ಸಮೀಪದ ಎಚ್ಎಸ್ ಆರ್ ಲೇಔಟ್ ಮತ್ತು ಇಂದಿರಾನಗರದಲ್ಲಿ ಬೆಂಗಳೂರು ನಗರದ ಅತಿದೊಡ್ಡ ಸ್ಮಾರ್ಟ್-ಅಪ್ ಕೇಂದ್ರಗಳಿವೆ. ಶಾಖೆಯು ವಿವಿಧ ಮಧ್ಯಸ್ಥಗಾರರೊಂದಿಗೆ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಪರಿಹಾರಗಳನ್ನು ಒದಗಿಸುವಲ್ಲಿ ಸಹಾಯ ಮಾಡುತ್ತದೆ ಮತ್ತು ಶಾಖೆಯ ಮೂಲಕ ಆದಿಯಿಂದ ಅಂತ್ಯದವರೆಗೆ ಹಣಕಾಸು ಮತ್ತು ಸಲಹಾ ಸೇವೆಗಳನ್ನು ಪಡೆಯಲು, ಸ್ಮಾರ್ಟ್-ಅಪ್ಗಳನ್ನು ಸಕ್ರಿಯಗೊಳಿಸಲು ಕೇಂದ್ರ ಶಾಖೆಯನ್ನು ಬೆಂಬಲಿಸುತ್ತದೆ.

ಈ ಕೇಂದ್ರವು ಸ್ಟೇಟ್ ಬ್ಯಾಂಕ್ ಗುಂಪಿನ ಎಲ್ಲಾ ಘಟಕಗಳು ಮತ್ತು ವಿವಿಧ ಇಲಾಖೆಗಳ ನಡುವೆ ಹೊಂದಾಣಿಕೆ ತರುವ ಮೂಲಕ ಮಾರುಕಟ್ಟೆಯಲ್ಲಿ ನಮ್ಮ ಬ್ಯಾಂಕ್ನ ದೊಡ್ಡ ಉಪಸ್ಥಿತಿಯನ್ನು ಸ್ಥಾಪಿಸಲಿದೆ. ಈ ಕಾರ್ಪೊರೇಟ್ಗಳು ಮತ್ತು ಸ್ಮಾರ್ಟ್ಅಪ್ಗಳಿಗೆ ಘಟಕದ ರಚನೆಯಿಂದ ಪ್ರಾರಂಭವಾಗಿ ಕಂಪನಿಗಳ IPO ಮತ್ತು FPO ಗಳವರೆಗೆ ಸೂಕ್ತ ಪರಿಹಾರ ನೀಡುತ್ತದೆ ಎಂದು ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಕೆಡಿಎಂನ ಸಿಒ ಸಂಜೀವ್ ಗುಪ್ತಾ , ಕೆಡಿಇಬಿ ಅಧ್ಯಕ್ಷ ಬಿ ವಿ ನಾಯ್ಡು, ಐಎಎಸ್ ಕಿಟ್ಸ್ ಅಧ್ಯಕ್ಷೆ ಮೀನಾ ನಾಗರಾಜ್, ಎಸ್.ಬಿ.ಐ ಸಿಜಿಎಂ ನಂದಕಿಶೋರ್ ಹಾಗೂ ಎಸ್.ಬಿ.ಐ ಎಂಡಿ ಅಲೋಕ್ ಚೌಧರಿ ಉಪಸ್ಥಿತರಿದ್ದರು.

Join Whatsapp