ತೆಲಂಗಾಣ: ಎಸ್.ಬಿ.ಐ. ಸಿಬ್ಬಂದಿ ಕ್ಲೆರಿಕಲ್ ದೋಷದಿಂದ 1.5 ಕೋಟಿ ರೂ.ಗಳನ್ನು 15 ಉದ್ಯೋಗಿಗಳ ಖಾತೆಗೆ ತಲಾ 10 ಲಕ್ಷ ರೂ.ನಂತೆ ತಪ್ಪು ವರ್ಗಾವಣೆಯಾದ ಘಟನೆ ನಡೆದಿದೆ.
ಎಸ್.ಬಿ.ಐ. ಸಿಬ್ಬಂದಿ ತಪ್ಪಿನಿಂದಾಗಿ ಲೋಟಸ್ ಆಸ್ಪತ್ರೆಯ 15 ಉದ್ಯೋಗಿಗಳ(ವೇತನ) ಖಾತೆಗಳಿಗೆ ಆಕಸ್ಮಿಕವಾಗಿ 1.50 ಕೋಟಿ ರೂ. ಜಮಾ ಆಗಿದೆ. ಪ್ರತಿಯೊಬ್ಬ ಉದ್ಯೋಗಿ ಖಾತೆಗೆ 10 ಲಕ್ಷ ರೂ. ವರ್ಗಾವಣೆಯಾಗಿದ್ದು, ಇದರ ಬೆನ್ನಲ್ಲೇ ‘ಆಕಸ್ಮಿಕ’ ಫಲಾನುಭವಿಯೊಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಶಾಖೆಯ ಅಧಿಕಾರಿಗಳು ತಪ್ಪು ಜಮಾ ಮಾಡಿದ್ದು, ತಕ್ಷಣ ಆಸ್ಪತ್ರೆಯ ನೌಕರರಿಗೆ ಮೊತ್ತವನ್ನು ಹಿಂತಿರುಗಿಸುವಂತೆ ಎಸ್.ಬಿ.ಐ. ರಂಗಾರೆಡ್ಡಿ ಜಿಲ್ಲಾ ಕಲೆಕ್ಟರೇಟ್ ಕೇಳಿಕೊಂಡಿದ್ದಾರೆ. 15 ಉದ್ಯೋಗಿಗಳಲ್ಲಿ 14 ಮಂದಿ ಹಣ ಹಿಂದಿರುಗಿಸಿದ್ದಾರೆ.
ಆದರೆ, ಮಹೇಶ್ ಎಂಬುವರು ಫೋನ್ ಗೆ ಸಿಗದ ಕಾರಣ ಅವರು ಹಣ ಹಿಂದಿರುಗಿಸಲು ಸಾಧ್ಯವಾಗಲಿಲ್ಲ. ಅಚ್ಚರಿಯೆಂದರೆ, 10 ಲಕ್ಷ ರೂಪಾಯಿಯನ್ನು ಪ್ರಧಾನಿ ನರೇಂದ್ರ ಮೋದಿ ತನ್ನ ಖಾತೆಗೆ ಜಮಾ ಮಾಡಿದ್ದಾರೆ ಎಂದು ಮಹೇಶ್ ತಿಳಿದುಕೊಂಡು ಸಾಲವನ್ನು ತೀರಿಸಲು ಹಣ ಬಳಸಿಕೊಂಡಿದ್ದಾನೆ. ಪದೇ ಪದೇ ಮನವಿ ಮಾಡಿದರೂ ಮಹೇಶ್ ಹಣವನ್ನು ಹಿಂದಿರುಗಿಸದ ಕಾರಣ ಆತನ ವಿರುದ್ಧ ಬ್ಯಾಂಕ್ ಅಧಿಕಾರಿ ದೂರು ದಾಖಲಿಸಿದ್ದಾರೆ.