ಬೆಂಗಳೂರು: ವಿಧಾನಸೌಧದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ವಿರುದ್ಧ ಮಾಜಿ ಸಚಿವ ಆರ್.ಅಶೋಕ್ ವಾಗ್ದಾಳಿ ನಡೆಸಿದರು. ಹಾಲಿನ ದರ 5 ರೂ. ನಿಂದ 6 ರೂ.ಗೆ ಹೆಚ್ಚಿಸುವ ನಿರ್ಧಾರ ಇದೆ. ಒಂದು ಕೈಯ್ಯಲ್ಲಿ ಕೊಟ್ಟು, ಎರಡು ಕೈಯಲ್ಲಿ ಬಾಚಿಕೊಳ್ಳುವ ಕೆಲಸ ನಡೆದಿದೆ. ಹಳ್ಳಿ ಕಡೆ ಓಡಾಡಲ್ಲ, ನಗರದಲ್ಲಿ ಓಡಾಡ್ತಾರೆ ಅಷ್ಟೇ. ಸದನದಲ್ಲಿ ಕಾಂಗ್ರೆಸ್ ಸಚಿವರೊಬ್ಬರು ಬಿಟ್ಟಿ ಸಲಹೆ ಕೊಟ್ರು. ಕರ್ನಾಟಕದಲ್ಲಿ ಬೆಲೆ ಏರಿಕೆಯಿಂದ ಜನ ಪರಿತಪಿಸಬೇಕಾಗಿದೆ. ಎಲ್ಲಾ ದರ ಹೆಚ್ಚಾದ್ರೆ ಜನ ಹೇಗೆ ಬದುಕಬೇಕು ಎಂದು ಆರ್. ಅಶೋಕ್ ಗರಂ ಆದರು.
ಕಾಂಗ್ರೆಸ್ ಸರ್ಕಾರ ರಾಜ್ಯದ ಆರ್ಥಿಕ ಪರಿಸ್ಥಿತಿ ಹಾಳು ಮಾಡ್ತಿದೆ. ಗ್ಯಾರಂಟಿ ಕೊಡ್ತೀನಿ ಎಂದು ಜನರ ಮೂಗಿಗೆ ತುಪ್ಪ ಸವರಿದೆ. ಉಚಿತ ಬಸ್ ಕೊಡಿ ಎಂದು ಜನರು ಕೇಳಿರಲಿಲ್ಲ. ಈಗಾಗಲೇ ಟೊಮ್ಯಾಟೊ ಸೇರಿ ಹಲವು ವಸ್ತುಗಳ ದರ ಏರಿಕೆಯಾಗಿದೆ. ಈಗ ಸರ್ಕಾರ ಹಾಲಿನ ದರ ಏರಿಕೆ ಮಾಡಲು ಹೊರಟಿದೆ. ಸರ್ಕಾರ ಐದು ಗ್ಯಾರಂಟಿ ನೀಡಿ ಎರಡೂ ಕೈಗಳಿಂದ ಕಿತ್ತುಕೊಳ್ಳುತ್ತಿದೆ. ಬಸ್ ನಲ್ಲಿ ಹೋಗುವ ದುಡ್ಡು ಉಳಿಯುತ್ತಲ್ಲ. ಅದ್ರಲ್ಲಿ ಟೊಮ್ಯಾಟೊ, ಹಾಲು ತಗೊಳ್ಳಿ. ಕಾಂಗ್ರೆಸ್ ಒಂದು ರೀತಿಯ ಡೊಂಬರಾಟದ ಸರ್ಕಾರ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್.ಅಶೋಕ್ ವಾಗ್ದಾಳಿ ನಡೆಸಿದರು.