ಸಾವರ್ಕರ್ ಕ್ಷಮಾಪಣಾ ಪತ್ರ ನೀಡಿದ್ದು ಜೀವ ಭಯದಿಂದಲ್ಲ; ಸಾತ್ಯಕಿ

Prasthutha|

ಹುಬ್ಬಳ್ಳಿ: ಅಂಡಮಾನ್ ಸೆಲ್ಯುಲಾರ್ ಜೈಲಿನಿಂದ ತಮ್ಮನ್ನು ಬಿಡುಗಡೆ ಮಾಡುವಂತೆ ಕೋರಿ ಸಾವರ್ಕರ್ ಅವರು ಬ್ರಿಟಿಷ್ ಅಧಿಕಾರಿಗಳಿಗೆ ಬರೆದ ಪತ್ರವು ಕ್ಷಮೆಯಾಚನೆಯ ಪತ್ರವಲ್ಲ, ಬದಲಾಗಿ ರಾಜಿ ಸಂಧಾನದ ಪತ್ರ ಎಂದು ಸಾವರ್ಕರ್ ಮರಿಮೊಮ್ಮಗ ಸಾತ್ಯಕಿ ಸಾವರ್ಕರ್ ಹೇಳಿದ್ದಾರೆ.

- Advertisement -

ನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ  ನಿರಾಮಯ ಫೌಂಡೇಶನ್ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯ್ ದಿವಸ್ ಮತ್ತು ಅಮೃತ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮಾತಾಡಿದ ಸಾತ್ಯಕಿ, ಸಾವರ್ಕರ್ ಅವರಿಗೆ ಕಳಪೆ ಗುಣಮಟ್ಟದ ಆಹಾರವನ್ನು ಒದಗಿಸಲಾಗುತ್ತಿತ್ತು. ಅದೇ ಸಮಯದಲ್ಲಿ, ಬ್ರಿಟಿಷರು ಹೊರಗೆ ಸಂತೋಷಪಡುತ್ತಿದ್ದರು. ಜೈಲಿನೊಳಗೆ ಉಳಿದುಕೊಂಡು ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಮನಗಂಡ ಸಾವರ್ಕರ್ ಬೇರೆ ಯಾವುದೇ ಆಯ್ಕೆಯಿಲ್ಲದೆಕ್ಷಮಾಪಣಾ ಪತ್ರ ಬರೆದಿದ್ದರು ಎಂದು ಹೇಳಿದರು.

ಭಾರತದ ಭವಿಷ್ಯದ ದೃಷ್ಟಿಯಲ್ಲಿ ಎಲ್ಲಾ ಹಿಂದೂ ಯುವಕರು ಅಗ್ನಿಪಥ್ ಯೋಜನರಯಡಿಯಲ್ಲಿ ಲಾಭ ಪಡೆಯಬೇಕು. ಸೈನ್ಯ, ಪೊಲೀಸ್, ರಾಜಕೀಯದಲ್ಲಿ ಹಿಂದೂ ಮನಸ್ಥಿತಿ ಹೊಂದಿದವರು ಇದ್ದರೆ ಮಾತ್ರ  ದೇಶದಲ್ಲಿ ತ್ರಿವರ್ಣ ಧ್ವಜ ಶಾಶ್ವತವಾಗಿ ಇರಲು ಸಾಧ್ಯ ಎಂದು ಹೇಳಿದರು



Join Whatsapp