ಸಾವರ್ಕರ್, ಹೆಡ್ಗೆವಾರ್, ಸೂಲೆಬೆಲೆ ಪಠ್ಯಗಳಿಗೆ ಕೊಕ್: ಸಚಿವ ಮಧು ಬಂಗಾರಪ್ಪ

Prasthutha|

ನೆಹರೂ, ಅಂಬೇಡ್ಕರ್ ಪಠ್ಯ ಸೇರ್ಪಡೆ

- Advertisement -


ಬೆಂಗಳೂರು: ಈ ಹಿಂದಿನ ಬಿಜೆಪಿ ಸರ್ಕಾರ ಶಾಲಾ ಪಠ್ಯದಲ್ಲಿ ಸೇರಿಸಿದ್ದ ಆರ್ ಎಸ್ ಎಸ್ ಮುಖಂಡ ಹೆಡಗೇವಾರ್, ವಿ.ಡಿ ಸಾವರ್ಕರ್ ಹಾಗೂ ಸೂಲಿಬೆಲೆ ಚಕ್ರವರ್ತಿಯವರ ಪಠ್ಯವನ್ನು ಕೈಬಿಡಲು ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.


ಸಚಿವ ಸಂಪುಟ ಸಭೆ ಬಳಿಕ ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಕ್ಕಳ ಹಿತದೃಷ್ಟಿಯಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ. ಪಠ್ಯ ಪರಿಷ್ಕರಣೆ ವಿಷಯದಲ್ಲಿ ಸಿಎಂ ನಿರಂತರ ಮಾರ್ಗ ದರ್ಶನ ಮಾಡುತ್ತಿದ್ದಾರೆ. ಈಗಾಗಲೇ ಪಠ್ಯ ಶಾಲೆಗಳಿಗೆ ಹೋಗಿದೆ. ಮತ್ತೆ ಪ್ರಿಂಟ್ ಮಾಡಿ ಕಳಿಸುವುದು ಕಷ್ಟ. ಆದರೆ ಸಪ್ಲಿಮೆಂಟರಿ ಪರಿಷ್ಕರಣೆ ಮಾಡಲು ಅವಕಾಶವಿದೆ. ಯಾವುದು ಉಳಿಸಿಕೊಳ್ಳುವುದು ಎಂದು ನಿರ್ಧರಿಸಬಹುದು ಎಂದರು.

- Advertisement -


ರಾಜಪ್ಪ ದಳವಾಯಿ, ಪ್ರೊ.ಚಂದ್ರಶೇಖರ್, ರಾಜೇಶ್, ಅಶ್ವತ್ಥನಾರಾಯಣ ಅವರ ಸಮಿತಿಯು 45 ಬದಲಾವಣೆಗಳನ್ನು ಮಾಡಲು ಸಲಹೆ ನೀಡಿತ್ತು. ಪ್ಯಾರಾಗ್ರಾಫ್, ಪದಗಳನ್ನು ಬದಲಿಸಲು ಕೋರಿಕೆ ಇಡಲಾಗಿತ್ತು ಎಂದು ಅವರು ಹೇಳಿದರು.
ಯಾವುದು ಹೇಳಿಕೊಡಬೇಕು, ಯಾವುದು ಹೇಳಿಕೊಡಬಾರದೆಂದು ಶಿಕ್ಷಕರಿಗೆ ತಿಳಿಸಲಾಗುತ್ತದೆ. ಅಂದಾಜು 15 ಪುಟಗಳ ಪುಸ್ತಕ ಇರಲಿದೆ ಎಂದು ಅವರು ಹೇಳಿದರು.



Join Whatsapp