ಸಾವರ್ಕರ್ ಸಾಮ್ರಾಜ್ಯ ಕಾರ್ಯಕ್ರಮ: ಕಾರು ಜಖಂಗೊಳಿಸಿದ ಹರ್ಷ ಸಹೋದರಿ ಅಶ್ವಿನಿ ಸೇರಿ 15 ಜನರ ವಿರುದ್ಧ ಎಫ್ಐಆರ್

Prasthutha|

ಶಿವಮೊಗ್ಗ: ಕಾರನ್ನು ಜಖಂ ಗೊಳಿಸಿದ ಆರೋಪದ ಮೇಲೆ ಇತ್ತೀಚೆಗೆ ಕೊಲೆಗೀಡಾದ ಹರ್ಷ ಅವರ ಸಹೋದರಿ ಅಶ್ವಿನಿ ಸೇರಿದಂತೆ ಒಟ್ಟು 15 ಮಂದಿ ವಿರುದ್ಧ ಇಲ್ಲಿನ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.

- Advertisement -

ಅಕ್ಟೋಬರ್ 22 ರಂದು ಸಂಜೆ ಸಾವರ್ಕರ್ ಸಾಮ್ರಾಜ್ಯ ಕಾರ್ಯಕ್ರಮದ ಪ್ರಯುಕ್ತ ಬೈಕ್ ಜಾಥ ನಡೆಸಲಾಗಿತ್ತು.  ಅದರಂತೆ ನಗರದ ಅಮೀರ್ ಅಹ್ಮದ್ ವೃತ್ತದಿಂದ ಬೈಕ್ ಜಾಥಾ ನಡೆದಿತ್ತು. ಕಲ್ಲಪ್ಪನ ಕೇರಿಯಿಂದ ಬೈಕ್ ಗಳಲ್ಲಿ ಗುಂಪಾಗಿ ಕಾರ್ಯಕರ್ತರು ತೆರಳಿದ್ದಾರೆ.

ಜಾಥಾ ಸಾಗುತ್ತಿದ್ದಾಗ ಆಜಾದ್ ನಗರದ ಮನೆಯ ಮುಂದೆ ನಿಲ್ಲಿಸಿದ್ದ ಕೆಎ 36 ಎಂ 2736  ಕ್ರಮ ಸಂಖ್ಯೆಯ ಇನೊವಾ ಕಾರಿನ ಎಡಭಾಗದ ಹೆಡ್ ಲೈಟ್, ಸೈಡ್ ಡೋರ್, ಬ್ಯಾಕ್ ಸೈಡ್ ಮಡ್ ಗಾರ್ಡ್ ಅನ್ನು ಜಖಂಗೊಳಿಸಿರುವುದಾಗಿ ಕಾರು ಮಾಲೀಕ ಸೈಯದ್ ಪರ್ವೇಝ್ ಎಂಬುವರು ನೀಡಿದ ದೂರಿನ ಮೇರೆಗೆ ದೊಡ್ಡಪೇಟೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

ವಾಹನಗಳನ್ನು ಜಖಂ ಗೊಳಿಸಿದ ಆರೋಪದ ಮೇಲೆ ಕೊಲೆಯಾದ ಹರ್ಷ ಸಹೋದರಿ ಅಶ್ವಿನಿ ಸೇರಿದಂತೆ ಒಟ್ಟು 15 ಮಂದಿ ವಿರುದ್ಧ ಜಿಲ್ಲೆಯ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಅಶ್ವಿನಿ ಹಾಗೂ 10 ರಿಂದ 15 ಜನರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸಯ್ಯದ್ ಪರ್ವೇಝ್ ದೊಡ್ಡ ಪೇಟೆ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಜೈ ಶ್ರೀರಾಮ್ ಎಂದು ಕೂಗುತ್ತಾ ಬಂದ ಗುಂಪು ಕೇಸರಿ ಬಾವುಟ ಹಿಡಿದುಕೊಂಡು ಬಂದು ಕಾರನ್ನು ಹಾನಿ ಮಾಡಿರುವುದಾಗಿ ಸಯ್ಯದ್ ಪರ್ವೀಝ್ ದೂರನಲ್ಲಿ ದಾಖಲಿಸಿದ್ದಾರೆ. ಸಯ್ಯದ್ ಪರ್ವೀಝ್ ಇತ್ತೀಚೆಗಷ್ಟೆ ಅಸ್ಲಂ ಎಂಬುವರಿಂದ ಕಾರು ಖರೀದಿಸಿದ್ದರು. ಕಾರು ಮಾಲೀಕರ ಹೆಸರು ಬದಲಾವಣೆಗೆ ಆರ್ ಟಿ ಒ ಕಚೇರಿಗೆ ಅರ್ಜಿ ಸಲ್ಲಿಸಿದ್ದಾರೆ.



Join Whatsapp