ದೆಹಲಿಯ ನೂತನ ಸಚಿವರಾಗಿ ಅತಿಶಿ, ಸೌರಭ್ ಭಾರದ್ವಾಜ್ ಪ್ರಮಾಣ ವಚನ

Prasthutha|

ನವದೆಹಲಿ: ದೆಹಲಿ ಸರ್ಕಾರದ ನೂತನ ಸಚಿವರಾಗಿ ಎಎಪಿ ಶಾಸಕರಾದ ಸೌರಭ್ ಭಾರದ್ವಾಜ್ ಮತ್ತು ಅತಿಶಿ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

- Advertisement -


ಅತಿಶಿ ಅವರಿಗೆ ಶಿಕ್ಷಣ, ಲೋಕೋಪಯೋಗಿ, ಇಂಧನ ಮತ್ತು ಪ್ರವಾಸೋದ್ಯಮ ಖಾತೆಗಳನ್ನು ನೀಡಲಾಗಿದ್ದು, ಭಾರದ್ವಾಜ್ ಅವರಿಗೆ ಆರೋಗ್ಯ, ನಗರಾಭಿವೃದ್ಧಿ, ನೀರು ಮತ್ತು ಕೈಗಾರಿಕೆ ಖಾತೆಗಳನ್ನು ವಹಿಸಲಾಗಿದೆ.


ಸಿಎಂ ಅರವಿಂದ ಕೇಜ್ರಿವಾಲ್ ಸಮ್ಮುಖದಲ್ಲಿ ಪ್ರಮಣವಚನ ಕಾರ್ಯಕ್ರಮ ನಡೆದಿದ್ದು, ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ಪ್ರತಿಜ್ಞಾವಿಧಿ ಬೋಧಿಸಿದರು.



Join Whatsapp