ಉಮ್ರಾ ವೀಸಾ ಅವಧಿ ವಿಸ್ತರಣೆಗೆ ಸೌದಿ ಪ್ರಾಧಿಕಾರ ಸಮ್ಮತಿ

Prasthutha|

🖊️Anon Suf

- Advertisement -

ರಿಯಾದ್: ಇನ್ನು ಮುಂದೆ ಎಲೆಕ್ಟ್ರಾನಿಕ್ ಉಮ್ರಾ ವೀಸಾಗಳು ದಿನದ 24 ಗಂಟೆಗಳಲ್ಲಿ ಲಭ್ಯವಿದ್ದು, ವೀಸಾ ಅವಧಿಯನ್ನು ವಿಸ್ತರಣೆ ಮಾಡಲು ಅವಕಾಶ ನೀಡಲಾಗಿದೆ ಎಂದು ಸೌದಿ ಹಜ್ ಮತ್ತು ಉಮ್ರಾ ಸಚಿವ ಡಾ. ತೌಫೀಕ್ ರಬಿಯಾ ತಿಳಿಸಿದ್ದಾರೆ.

ಈ ಆದೇಶದನ್ವಯ ಒಂದು ತಿಂಗಳ ವೀಸಾವನ್ನು ಮತ್ತೆ ಮೂರು ತಿಂಗಳ ವರೆಗೆ ವಿಸ್ತರಿಸಬಹುದು. ಜೊತೆಗೆ ಉಮ್ರಾ ಯಾತ್ರಾರ್ಥಿಗಳು ಸೌದಿ ಅರೇಬಿಯಾದ ಇತರೆ ಪ್ರದೇಶಗಳಿಗೂ ಪ್ರಯಾಣಿಸಬಹುದು. ಇದು ಸೌದಿ ಅರೇಬಿಯಾದ ಐತಿಹಾಸಿಕ ನಿರ್ಧಾರ ಎಂದು ಪರಿಗಣಿಸಲಾಗಿದೆ. ಈ ಹಿಂದೆ ಉಮ್ರಾ ಯಾತ್ರಾರ್ಥಿಗಳು ಒಂದು ತಿಂಗಳೊಳಗೆ ಸೌದಿ ಅರೇಬಿಯಾವನ್ನು ಕಡ್ಡಾಯವಾಗಿ ತೊರೆಯಬೇಕಾಗಿತ್ತು.

Join Whatsapp