ಸೌದಿ ಅರೇಬಿಯಾದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ತಮ್ಮ ತಂದೆಯ ಸಹಿ ನಕಲು ಮಾಡಿದ್ದರು: ಮಾಜಿ ಅಧಿಕಾರಿ

Prasthutha|

ರಿಯಾದ್ : ಸೌದಿಯ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ತಮ್ಮ ತಂದೆಯ ಸಹಿಯನ್ನು ನಕಲು ಮಾಡಿದ್ದಾರೆ ಎಂದು ಸೌದಿ ಅರೇಬಿಯಾದ ಮಾಜಿ ಅಧಿಕಾರಿಯೊಬ್ಬರು ಆರೋಪಿಸಿದ್ದಾರೆ.

- Advertisement -

ಯುವರಾಜ ಮುಹಮ್ಮದ್ ಯೆಮನ್‌ನ ಹೌದಿ ಬಂಡುಗೋರರ ವಿರುದ್ಧ ಸುಮಾರು 10 ವರ್ಷ ಮುಂದುವರಿದ ಯುದ್ಧವನ್ನು ಪ್ರಾರಂಭಿಸಿದ ರಾಜಮನೆತನದ ಆದೇಶದಲ್ಲಿ ತಮ್ಮ ತಂದೆಯ ಸಹಿಯನ್ನು ನಕಲು ಮಾಡಿದ್ದಾರೆ ಎಂದು ಸೌದಿಯ ಆಂತರಿಕ ಸಚಿವಾಲಯಕ್ಕೆ ಸಂಬಂಧಿಸಿದ ವಿಶ್ವಾಸಾರ್ಹ, ನಂಬಲರ್ಹ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ ಎಂದು ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಸೌದಿಯ ಮಾಜಿ ಗುಪ್ತಚರ ಅಧಿಕಾರಿ, ಕೆನಡಾದಲ್ಲಿ ದೇಶಭ್ರಷ್ಟ ಜೀವನನಡೆಸುತ್ತಿರುವ ಸಾದ್ ಅಲ್-ಜಬ್ರಿ ಹೇಳಿದ್ದಾರೆ.

ಜಬ್ರಿ ದೇಶಭ್ರಷ್ಟರು, ಅವರ ಇಬ್ಬರು ಮಕ್ಕಳು ಪ್ರಕರಣವೊಂದಕ್ಕೆ ಸಂಬಂಧಿಸಿ ಸೌದಿಯಲ್ಲಿ ಜೈಲುಶಿಕ್ಷೆ ಅನುಭವಿಸುತ್ತಿದ್ದಾರೆ. ಜಬ್ರಿ ಕಳಂಕಿತ ಮಾಜಿ ಅಧಿಕಾರಿ ಎಂದು ಸೌದಿ ಅರೆಬಿಯಾ ಪ್ರತಿಕ್ರಿಯಿಸಿದೆ.

- Advertisement -

2015ರಲ್ಲಿ ಯೆಮನ್‌ನಲ್ಲಿ ಇರಾನ್ ಬೆಂಬಲಿತ ಹೌದಿ ಬಂಡುಕೋರರ ವಿರುದ್ಧ ಸೌದಿ ನೇತೃತ್ವದ ಮೈತ್ರಿಪಡೆಗಳಿಂದ ಸುಮಾರು 10 ವರ್ಷದಿಂದ ಮುಂದುವರಿದ ಯುದ್ಧದಲ್ಲಿ 1,50,000ಕ್ಕೂ ಅಧಿಕ ಮಂದಿ ಮೃತರಾಗಿದ್ದರು ಎಂದು ಜಬ್ರಿ ವರದಿಯೊಂದರಲ್ಲಿ ಹೇಳಿದ್ದಾರೆ.

ಮುಹಮ್ಮದ್ ಬಿನ್ ಸಲ್ಮಾನ್ ಪ್ರಸ್ತುತ ಸೌದಿ ಅರೇಬಿಯಾದ ರಾಜಕುಮಾರ ಮತ್ತು ಪ್ರಧಾನ ಮಂತ್ರಿಯಾಗಿದ್ದಾರೆ . ಅವರು ಸೌದಿ ಅರೇಬಿಯಾದ ರಾಜ ಸಲ್ಮಾನ್ ಅವರ ಏಳನೇ ಮಗ ಮತ್ತು ರಾಷ್ಟ್ರದ ಸಂಸ್ಥಾಪಕ ರಾಜ ಅಬ್ದುಲ್ ಅಝೀಝ್ ಅವರ ಮೊಮ್ಮಗರಾಗಿದ್ದಾರೆ.



Join Whatsapp