ಸೌದಿಯಲ್ಲಿ ಮಳೆಗಾಗಿ ನಾಳೆ ವಿಶೇಷ ಪ್ರಾರ್ಥನೆ

Prasthutha|

ಜಿದ್ದಾ: ಸೌದಿ ಅರೇಬಿಯಾದ ವಿವಿಧ ಭಾಗಗಳಲ್ಲಿ ಮಳೆಗಾಗಿ ಗುರುವಾರದಂದು ವಿಶೇಷ ಪ್ರಾರ್ಥನೆ ಸಲ್ಲಿಸಲು ದೊರೆ ಸಲ್ಮಾನ್ ಕರೆ ನೀಡಿದ್ದು, ರಾಯಲ್ ಕೋರ್ಟ್ ಆದೇಶವನ್ನು ಬಿಡುಗಡೆಗೊಳಿಸಿದೆ.

- Advertisement -

ಮಳೆಗಾಗಿ ಪ್ರಾರ್ಥಿಸುವುದು ಪ್ರವಾದಿ ಅನುಸರಣೆಯ ಭಾಗವಾಗಿದೆ. ದೇಶದ ಎಲ್ಲಾ ಭಾಗಗಳಲ್ಲಿರುವ ಜನರು ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲು ಪ್ರಯತ್ನಿಸಬೇಕು ಎಂದು ರಾಯಲ್ ಕೋರ್ಟ್ ಪ್ರಕಟನೆಯಲ್ಲಿ ತಿಳಿಸಿದೆ.

ಪ್ರಕಾರ, ದೊರೆ ಸಲ್ಮಾನ್ ಅವರ ಆದೇಶವನ್ನು ಅನುಸರಿಸಿ ದೇಶಾದ್ಯಂತ ಮಸೀದಿಗಳಲ್ಲಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸಲು ಸಮಯ ನಿಗದಿಪಡಿಸಲಾಗಿದೆ ಎಂದು ಧಾರ್ಮಿಕ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಸೂರ್ಯೋದಯದ 15 ನಿಮಿಷಗಳ ನಂತರ ಪ್ರಾರ್ಥನೆ ಪ್ರಾರಂಭವಾಗಲಿದೆ.

Join Whatsapp