ಸೌದಿ ಅರೇಬಿಯಾಕ್ಕೆ ಪ್ರಯಾಣಿಸುವವರಿಗೆ 48 ಗಂಟೆಯೊಳಗಿನ ಪಿಸಿಆರ್ ಪ್ರಮಾಣಪತ್ರ ಕಡ್ಡಾಯ

Prasthutha|

- Advertisement -

ಜಿದ್ದಾ: ನಾಗರಿಕರು ಸೇರಿದಂತೆ ಸೌದಿ ಅರೇಬಿಯಾಕ್ಕೆ ಬರುವ ಪ್ರತಿಯೊಬ್ಬರೂ 48 ಗಂಟೆಯೊಳಗೆ ಪಡೆದ ಅನುಮೋದಿತ ಪಿಸಿಆರ್ ಪರಿಶೀಲನೆ ಪ್ರಮಾಣಪತ್ರವನ್ನು ಸಲ್ಲಿಸಬೇಕು ಎಂದು ಆಂತರಿಕ ಸಚಿವಾಲಯದ ಮೂಲಗಳು ತಿಳಿಸಿವೆ.

ಎಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಇದು ಅನ್ವಯಿಸುವುದಿಲ್ಲ.

- Advertisement -

ಅದಲ್ಲದೆ ಸೌದಿಯಿಂದ ಬೇರೆ ದೇಶಕ್ಕೆ ಪ್ರಯಾಣಿಸುವ ನಾಗರಿಕರು ಕೋವಿಡ್ ಲಸಿಕೆಯ ಎರಡನೇ ಡೋಸ್ ಪಡೆದ ಮೂರು ತಿಂಗಳ ನಂತರದ ಬೂಸ್ಟರ್ ಡೋಸ್ ಪಡೆದುಕೊಳ್ಳುವುದು ಕಡ್ಡಾಯವಾಗಿದೆ. 16 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಇದು ಅನ್ವಹಿಸುವುದಿಲ್ಲ. ಈ ಹೊಸ ನಿಯಮಗಳು ಈ ತಿಂಗಳ 9 ರಿಂದ (ಬುಧವಾರ) ಜಾರಿಗೆ ಬರಲಿವೆ ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.

Join Whatsapp