ಸೌದಿ ಅರೇಬಿಯಾ | ಇಕಾಮ ಅವಧಿ ಮುಗಿದವರಿಗೂ ತವಕ್ಕಲ್ನಾ appನಲ್ಲಿ ನೋಂದಾಯಿಸಿಕೊಳ್ಳಲು ಅವಕಾಶ

Prasthutha|

ಜೆದ್ದಾ : ಸೌದಿ ಅರೇಬಿಯಾದಲ್ಲಿ ತಮ್ಮ ರೆಸಿಡೆನ್ಸಿ ಪರವಾನಗಿ (ಇಕಾಮ) ಮಾನ್ಯತೆಯ ಅವಧಿ ಮುಗಿದ ವಲಸಿಗರಿಗೂ ತವಕ್ಕಲ್ನಾ ಅರ್ಜಿಯಲ್ಲಿ ತಮ್ಮನ್ನು ನೋಂದಾಯಿಸಿಕೊಳ್ಳಬಹುದು. ಆದಾಗ್ಯೂ, ಅಂತಿಮ ನಿರ್ಗಮನ ವೀಸಾ ಹೊಂದಿರುವ ವಲಸಿಗರು ಈ ರೀತಿ ನೋಂದಾಯಿಸಿಕೊಳ್ಳುವಂತಿಲ್ಲ ಎಂದು app ಮ್ಯಾನೇಜ್ಮೆಂಟ್ ತಂಡ ತನ್ನ ಅಧಿಕೃತ ಟ್ವಿಟರ್ ಖಾತೆಯ ಪ್ರಕಟನೆಯಲ್ಲಿ ತಿಳಿಸಿದೆ.

- Advertisement -

ವಿಸಿಟಿಂಗ್ ವೀಸಾದಲ್ಲಿ ಸೌದಿ ಅರೇಬಿಯಾಕ್ಕೆ ಭೇಟಿ ನೀಡಿರುವವರು ಕೂಡ ಅರ್ಜಿಯಲ್ಲಿ ನೋಂದಾಯಿಸಲು ಅನುಮತಿಸಲಾಗಿದೆ. ಇದಕ್ಕಾಗಿ ಭೇಟಿ ವೀಸಾ ಹೊಂದಿರುವವರು ಅವನ ಅಥವಾ ಅವಳ ಪಾಸ್ ಪೋರ್ಟ್ ದಿನಾಂಕ, ರಾಷ್ಟ್ರೀಯತೆ, ಮೊಬೈಲ್ ನಂಬರ್ ಮತ್ತು ಪಾಸ್ ವರ್ಡ್ ನಂತಹ ಮಾಹಿತಿಗಳನನ್ನು ನಮೂದಿಸಬೇಕಾಗುತ್ತದೆ.

ಎರಡನೇ ಹಂತದ ಕೋವಿಡ್ ಸಾಂಕ್ರಾಮಿಕ ಭೀತಿಯ ನಂತರ ಸೌದಿ ಅರೇಬಿಯಾದಲ್ಲಿರುವ ಎಲ್ಲಾ ನಾಗರಿಕರು ಹಾಗೂ ವಲಸಿಗರಿಗೆ ತವಕಲ್ನಾ app ಕಡ್ಡಾಯವಾಗಿದ್ದು, ಶಾಪಿಂಗ್ ಮಾಲ್, ರೆಸ್ಟೋರೆಂಟ್, ಮೆಡಿಕಲ್ ಸ್ಟೋರ್, ಆಸ್ಪತ್ರೆ ಮುಂತಾದ ಎಲ್ಲಾ ಕಡೆಗಳಲ್ಲಿ ಈ app ಇಲ್ಲದವರಿಗೆ ಪ್ರವೇಶಾನುಮತಿ ನಿರಾಕರಿಸಲಾಗುತ್ತಿದೆ.

Join Whatsapp