ಸೌದಿ ಅರೇಬಿಯಾ| ಹೃದಯಾಘಾತದಿಂದ ಮೃತಪಟ್ಟ ಮಂಗಳೂರು ಮೂಲದ ವ್ಯಕ್ತಿ; ಅಂತ್ಯಕ್ರಿಯೆಗೆ ಇಂಡಿಯನ್ ಸೋಶಿಯಲ್ ಫೋರಂ ನೆರವು

Prasthutha|

ರಿಯಾದ್: ಸುಮಾರು 27 ವರ್ಷಗಳಿಂದ ಸೌದಿ ಅರೇಬಿಯಾದ ರಿಯಾದ್ ನಲ್ಲಿ ಹೌಸ್ ಡ್ರೈವರ್ ಆಗಿದ್ದ ಮಂಗಳೂರು ತಾಲೂಕಿನ ಕುಡುಮನ್ ಹಮೀದ್ ಚೇರಿಯಬ್ಬ (55) ಹೃದಯಾಘಾತದಿಂದ ಮೃತಪಟ್ಟಿದ್ದು, ಇಂಡಿಯನ್ ಸೋಶಿಯಲ್ ಫೋರಂನ ಸಹಕಾರದಿಂದ ರಿಯಾದ್ ನ ಅಲ್ ರಾಜಿ಼ ಮಸೀದಿಯಲ್ಲಿ ಅಂತಿಮ ವಿಧಿ ವಿಧಾನಗಳನ್ನು ಪೂರೈಸಿ, ಮಯ್ಯತ್ ನಮಾಜ್ ಮಾಡಿ ನಸೀಮ್ ದಫನಭೂಮಿಯಲ್ಲಿ ದಫನ ಕಾರ್ಯ ನಿರ್ವಹಿಸಲಾಯಿತು.

- Advertisement -

ಆಸ್ಪತ್ರೆಯಲ್ಲಿರುವ ಮೃತದೇಹದ ಅಂತ್ಯಕ್ರಿಯೆ ನೆರವೇರಿಸಲು ಮೃತರ ಸಂಬಂಧಿಕರು ಇಂಡಿಯನ್ ಸೋಶಿಯಲ್ ಫೋರಂನ ಸದಸ್ಯರನ್ನು ನೆರವಿಗಾಗಿ ಸಂಪರ್ಕಿಸಿದ್ದರು.

ತಕ್ಷಣವೇ ಸ್ಪಂದಿಸಿದ ಇಂಡಿಯನ್ ಸೋಶಿಯಲ್ ಫೋರಂನ ನಿಝಾಮ್ ಬಜ್ಪೆ ಮತ್ತು ನಿಸಾರ್ ವಳವೂರು ತಂಡದ ನೇತೃತ್ವದಲ್ಲಿ ಸೌದಿ ಅರೇಬಿಯಾದ ಕಾನೂನಿನಂತೆ ಸ್ಥಳೀಯ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ಕುಡುಮನ್ ಹಮೀದ್ ಚೇರಿಯಬ್ಬರ ಮರಣವು ಸಹಜ ಮರಣವೆಂದು ದೃಢೀಕರಣ ಪತ್ರ ಪಡೆಯಲಾಯಿತು.

- Advertisement -

ಹಮೀದ್ ರವರ ಅಕಾಲಿಕ ಮರಣಕ್ಕೆ ಇಂಡಿಯನ್ ಸೋಶಿಯಲ್ ಫೋರಂನ ಕರ್ನಾಟಕ ರಾಜ್ಯ ಕಾರ್ಯಕಾರಿಣಿ ಸಮಿತಿಯು ಸಂತಾಪ ಸೂಚಿಸಿದೆ. ಇಂಡಿಯನ್ ಸೋಶಿಯಲ್ ಫೋರಂನ ಈ ಸತ್ಕಾರ್ಯಕ್ಕೆ ಮೃತರ ಸಂಬಂಧಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.



Join Whatsapp