ರಿಯಾದ್: ಸೌದಿ ಅರೇಬಿಯಾ ಮತ್ತು ಇಸ್ರೇಲ್ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯುತ್ತಿದ್ದು, ಭವಿಷ್ಯದಲ್ಲಿ ಉಭಯ ರಾಷ್ಟ್ರಗಳ ಮಧ್ಯೆ ಮೈತ್ರಿ ಏರ್ಪಡುವುದು ನಿಚ್ಚಳವಾಗಿದೆ ಎಂದು ಸೌದಿ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಮೆರಿಕ ಮೂಲದ ಮ್ಯಾಗಝಿನ್ ದಿ ಅಟ್ಲಾಂಟಿಕ್ ನೊಂದಿಗೆ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ಇದರ ಮುಂದುವರಿದ ಭಾಗವಾಗಿ ಇಸ್ರೇಲ್ ಮತ್ತು ಫೆಲೆಸ್ತೀನ್ ನಡುವಿನ ಸಂಘರ್ಷವನ್ನು ಬಗೆಹರಿಸಲಾಗುವುದೆಂದು ಅವರು ತಿಳಿಸಿದ್ದಾರೆ.
ಸೌದಿ ಅರೇಬಿಯಾದ ನೈಜ ಆಡಳಿತಗಾರನೊಬ್ಬ ಇಸ್ರೇಲ್ ಅನ್ನು ಶತ್ರುವಾಗಿ ನೋಡಲು ಬಯಸುವುದಿಲ್ಲ. ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸುವ ನಿಟ್ಟಿನಲ್ಲಿ ಮೈತ್ರಿಯ ಕುರಿತು ಯೋಚನೆ ನಡೆಸುತ್ತಾನೆ. ಅದಾಗ್ಯೂ ಮೈತ್ರಿಗೆ ಮೊದಲು ಇಸ್ರೇಲ್- ಫೆಲೆಸ್ತೀನ್ ರಾಷ್ಟ್ರಗಳಿಗಿರುವ ಸಮಸ್ಯೆಗಳನ್ನು ಪರಿಹರಿಸಬೇಕಾಗಿದೆ ಎಂದು ಮುಹಮ್ಮದ್ ಸಲ್ಮಾನ್ ಒತ್ತಿ ಹೇಳಿದ್ದಾರೆ.
2020 ರಲ್ಲಿ ಮಹತ್ವದ ಬೆಳವಣಿಗೆಯೊಂದರಲ್ಲಿ ಬಹ್ರೈನ್ ಮತ್ತು ಯುಎಇ ರಾಷ್ಟ್ರಗಳು ಇಸ್ರೇಲ್ ನೊಂದಿಗೆ ತಮ್ಮ ಸಂಬಂಧವನ್ನು ಬಲಪಡಿಸಿರುವ ಕುರಿತು ರಾಜಕುಮಾರ ಮುಹಮ್ಮದ್ ಉಲ್ಲೇಖಿಸಿದ್ದು, ಈಜಿಪ್ಟ್ ಮತ್ತು ಜೋಡಾರ್ನ್ ಕೂಡ ಈ ಹಿಂದೆ ಇಸ್ರೇಲ್ ನೊಂದಿಗೆ ಉತ್ತಮ ಭಾಂದವ್ಯವನ್ನು ಹೊಂದಿತ್ತು ಎಂದು ತಿಳಿಸಿದ್ದಾರೆ.
ಈ ಮಧ್ಯೆ ಫೆಲೆಸ್ತೀನ್ ಸಮಸ್ಯೆಯನ್ನು ಪರಿಹರಿಸುವವರೆಗೂ ಇಸ್ರೇಲ್ ನೊಂದಿಗೆ ದ್ವಿಪಕ್ಷೀಯ ಸಂಬಂಧವನ್ನು ಬೆಳೆಸುವುದಿಲ್ಲ ಎಂದು ಹೇಳುತ್ತಿದ್ದರೂ, ಸೌದಿ ರಾಜಕುಮಾರ ಇಸ್ರೇಲ್ ಪರವಾಗಿ ಮೃದುಧೋರಣೆಯನ್ನು ಹೊಂದಿದ್ದಾರೆ ಎಂದು ಹೇಳಲಾಗಿದೆ. ಇತ್ತೀಚಿನ ಬೆಳವಣಿಗೆಯೊಂದರಲ್ಲಿ ಇಸ್ರೇಲ್ ವಿಮಾನಗಳು ಸೌದಿ ಅರೇಬಿಯಾದ ವಾಯುನೆಲೆಯಲ್ಲಿ ಹಾರಾಟ ನಡೆಸುತ್ತಿರುವುದು ಇದಕ್ಕೆ ಸ್ಪಷ್ಟವಾದ ನಿದರ್ಶನ