ರಿಯಾದ್ : ಭಾರತದಿಂದ ಸೌದಿ ಅರೇಬಿಯಾಗೆ ತೆರಳುವ ವಿಮಾನಗಳ ನಿಷೇಧವು ಶೀಘ್ರದಲ್ಲೇ ಕೊನೆಗೊಳ್ಳಲಿದೆ ಎಂದು ಸೌದಿ ಅರೇಬಿಯಾದ ಭಾರತೀಯ ರಾಯಭಾರಿ ಡಾ. ಔಸಾಫ್ ಸಯೀದ್ ಹೇಳಿದ್ದಾರೆ.
ಈ ಬಗ್ಗೆ ಸೌದಿ ಅರೇಬಿಯಾ ಆರೋಗ್ಯ ಸಚಿವರೊಂದಿಗೆ ನಡೆಸಿದ ಮಾತುಕತೆ ಆಶಾದಾಯಕವಾಗಿತ್ತು ಎಂದು ಅವರು ಹೇಳಿದ್ದಾರೆ.
ಅನೇಕ ಭಾರತೀಯರು ಸೌದಿ ಅರೇಬಿಯಾಕ್ಕೆ ಮರಳಲು ಕಾಯುತ್ತಿದ್ದಾರೆ. ಪ್ರಸ್ತುತ ಯುಎಇಗೆ ಪ್ರಯಾಣಿಸಿ 14 ದಿಣಗಳ ಕಾಲ ಕ್ವಾರಂಟೈನ್ ನಲ್ಲಿ ಉಳಿದು ಸೌದಿ ಅರೇಬಿಯಾಗೆ ಮರಳುತ್ತಿದ್ದು, ದುಬಾರಿ ವೆಚ್ಚ ಭರಿಸುವಂತಾಗಿದೆ.
ಈ ಹಿಂದೆ ಘೋಷಿಸಿದಂತೆ ಭಾರತೀಯ ವಿಮಾನಗಳ ನಿಷೇಧವನ್ನು ತೆರವುಗೊಳಿಸಲು ನಾವು ಮಾರ್ಚ್ 31ರ ವರೆಗೆ ಕಾಯಬೇಕಾಗಿಲ್ಲ ಎಂದು ಅವರು ತಿಳಿಸಿದ್ದಾರೆ.