ಕೀವ್: ಸೌದಿ ಅರೇಬಿಯಾ ಯುದ್ಧ ಪೀಡಿತ ಉಕ್ರೇನ್‌ಗೆ 400 ಮಿಲಿಯನ್ ಡಾಲರ್ ನೆರವು ನೀಡಿದೆ.
2022ರ ಅಕ್ಟೋಬರ್‌ನಲ್ಲಿ ಸೌದಿ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಉಕ್ರೇನ್ ಅಧ್ಯಕ್ಷರೊಂದಿಗಿನ ದೂರವಾಣಿ ಸಂಭಾಷಣೆಯಲ್ಲಿ ಉಕ್ರೇನ್‌ಗೆ ಹಣಕಾಸಿನ ನೆರವು ನೀಡುವುದಾಗಿ ಭರವಸೆ ನೀಡಿದ್ದರು. ಆ ಭರವಸೆಯನ್ನು ಈಗ ಈಡೇರಿಸಿದ್ದಾರೆ ಎಂದು ಸೌದಿ ಮೂಲಗಳು ತಿಳಿಸಿವೆ.
ಸೌದಿ ವಿದೇಶಾಂಗ ಸಚಿವ ಹಾಗೂ ರಾಜಕುಮಾರ ಫೈಝಲ್ ಬಿನ್ ಫರ್ಹಾನ್ ಮತ್ತು ಉಕ್ರೇನ್ ಅಧ್ಯಕ್ಷರ ಕಚೇರಿಯ ಮುಖ್ಯಸ್ಥ ಆಂಡ್ರಿ ಯೆರ್ಮಾಕ್ ಒಪ್ಪಂದದ ಸಹಿ ಸಮಾರಂಭದಲ್ಲಿ ಭಾಗವಹಿಸಿದ್ದರು.
ಭಾನುವಾರ ಕೀವ್‌ಗೆ ಆಗಮಿಸಿದ ರಾಜಕುಮಾರ ಫೈಝಲ್ ಅವರನ್ನು ಉಕ್ರೇನ್ ಅಧ್ಯಕ್ಷ ವ್ಲಾದಿಮಿರ್ ಝೆಲೆನ್ಸ್ಕಿ ಬರಮಾಡಿಕೊಂಡಿದ್ದರು.
ರಾಯಲ್ ಕೋರ್ಟ್‌ನ ಸಲಹೆಗಾರ, ಕಿಂಗ್ ಸಲ್ಮಾನ್ ಹ್ಯೂಮನಿಟೇರಿಯನ್ ಆ್ಯಡ್ ಆ್ಯಂಡ್ ರಿಲೀಫ್ ಸೆಂಟರ್‌ನ ಮೇಲ್ವಿಚಾರಕ ಅಬ್ದುಲ್ಲಾ ಅಲ್ ರಬಿಯಾ ಮತ್ತು ಉಕ್ರೇನ್‌ನ ಉಪ ಪ್ರಧಾನ ಮಂತ್ರಿ ಅಲೆಕ್ಸಾಂಡರ್ ಕುಬ್ರಕೋವ್ ಅವರು ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.