ರಿಯಾಧ್ : ಸೌದಿ ಅರೇಬಿಯಾದ ವಾಯು ಸಾರಿಗೆ ವಲಯದಲ್ಲಿ 28 ವೃತ್ತಿಗಳನ್ನು ಸ್ಥಳೀಯರಿಗೆ ಮೀಸಲಿಡಲು ಅಲ್ಲಿನ ಆಡಳಿತ ನಿರ್ಧರಿಸಿದೆ. ನಾಗರಿಕ ವಿಮಾನಯಾನ ಪ್ರಧಾನ ಪ್ರಾಧಿಕಾರ ಈ ವಿಷಯ ಘೋಷಿಸಿದೆ.
ಪೈಲಟ್, ಫ್ಲೈಟ್ ಅಟೆಂಡೆಂಟ್, ಏರ್ ಟ್ರಾಫಿಕ್ ಕಂಟ್ರೋಲರ್, ಸುಪರ್ ವೈಸರ್, ಫ್ಲೈಟ್ ಯಾರ್ಡ್ ಕೋಆರ್ಡಿನೇಟರ್ ಸೇರಿದಂತೆ 28 ವೃತ್ತಿಗಳು ಸ್ಥಳೀಯರಿಗೆ ಮೀಸಲಿಡಲು ನಿರ್ಧರಿಸಲಾಗಿದೆ.
ಖಾಸಗಿ ವಲಯದಲ್ಲಿ ಶೇ.30ರಷ್ಟು ಉದ್ಯೋಗಗಳನ್ನು ಸ್ಥಳೀಯರಿಗೆ ಮೀಸಲಿರಿಸಲು ಈ ಹಿಂದೆ ಅಲ್ಲಿನ ಆಡಳಿತ ನಿರ್ಧರಿಸಿತ್ತು.