ಭಾರತ ಸೇರಿ ಒಂಬತ್ತು ದೇಶಗಳ ಶಿಕ್ಷಕರಿಗೆ ನೇರ ಪ್ರವೇಶ ಅನುಮತಿಸಿದ ಸೌದಿ ಅರೇಬಿಯಾ

Prasthutha|

ರಿಯಾದ್: ಕೋವಿಡ್ ನಿಂದಾಗಿ ಭಾರತ ಸೇರಿದಂತೆ 9 ರಾಷ್ಟ್ರಗಳಿಗೆ ಪ್ರಯಾಣಿಕರಿಗೆ ನಿರ್ಬಂಧ ಹೇರಿದ್ದ ಸೌದಿ ಅರೇಬಿಯಾ ಆಂತರಿಕ ಸಚಿವಾಲಯ, ಪ್ರಸಕ್ತ ಈಗ ಶಿಕ್ಷಣ ಸಿಬ್ಬಂದಿಗಳಿಗೆ ನೇರ ಪ್ರಯಾಣಕ್ಕೆ ಅವಕಾಶ ನೀಡಿದೆ ಎಂದು ಸೌದಿ ಪ್ರೆಸ್ ಏಜೆನ್ಸಿ ವರದಿ ಮಾಡಿದೆ.
ಸೌದಿ ಅರೇಬಿಯಾದ ಸಚಿವಾಲಯ ಈ ಕೆಳಗಿನ ವಿಭಾಗಗಳಿಗೆ ನೇರ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ.
• ವಿಶ್ವವಿದ್ಯಾಲಯ, ಕಾಲೇಜು ಮತ್ತು ಇನ್ನಿತರ ಶಿಕ್ಷಣಗಳ ಅಧ್ಯಾಪಕರು
• ಸಾಮಾನ್ಯ ಶಿಕ್ಷಕರು
• ತಾಂತ್ರಿಕ ಮತ್ತು ವೃತ್ತಿಪರ ತರಬೇತಿ ನಿಗಮ ಮತ್ತು ತರಬೇತಿ ಸಂಸ್ಥೆಗಳಲ್ಲಿ ಮೇಲ್ವಿಚಾರಕ
• ಸ್ಕಾಲರ್ ಶಿಪ್ ವಿದ್ಯಾರ್ಥಿಗಳು

- Advertisement -

ನೂತನ ಆದೇಶದನ್ವಯ ತಮ್ಮ ದೇಶಗಳಿಂದ ನಿರ್ಗಮಿಸಿ ಸೌದಿ ಪ್ರವೇಶಿಸುವ ಮುನ್ನ ಮೂರನೇ ರಾಷ್ಟ್ರದಲ್ಲಿ 14 ದಿನದ ಕ್ವಾರಂಟೈನ್ ಅಗತ್ಯವಿರುವುದಿಲ್ಲ.

ಕೋವಿಡ್ ವಾಕ್ಸಿನ್ ಪಡೆಯದವರಿಗೆ ಸೌದಿ ಅರೇಬಿಯಾದಲ್ಲಿ 14 ದಿನಗಳ ಕ್ವಾರಂಟೈನ್ ಕಡ್ಡಾಯವಾಗಲಿದೆ. ಮಾತ್ರವಲ್ಲ ಈ ಅವಧಿಯಲ್ಲಿ ಅವರು ಲಸಿಕೆಯನ್ನು ಪಡೆಯಬೇಕಾಗಿದೆ ಎಂದು ಸಚಿವಾಲಯ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ.
ಪ್ರಸ್ತುತ ಭಾರತ, ಪಾಕಿಸ್ತಾನ, ಇಂಡೋನೇಷ್ಯಾ, ಈಜಿಪ್ಟ್, ಟರ್ಕಿ, ಬ್ರೆಜಿಲ್, ಇಥಿಯೋಪಿಯಾ, ವಿಯೆಟ್ನಾಂ, ಅಫ್ಘಾನಿಸ್ತಾನ ಮತ್ತು ಲೆಬನಾನ್ ದೇಶಗಳು ಪ್ರಯಾಣ ನಿಷೇಧವನ್ನು ಎದುರಿಸುತ್ತಿವೆ.

- Advertisement -

ಸೌದಿ ಅರೇಬಿಯಾದ ನೂತನ ನಿಯಮ ಅಲ್ಲಿನ ಅಧಿಕೃತ ರೆಸಿಡೆನ್ಸಿ ವೀಸಾ ಹೊಂದಿರುವ ಮತ್ತು ಸಂಪೂರ್ಣ ಲಸಿಕೆ ಪಡೆದ ವಿದೇಶಿಯರಿಗೆ ಮಾತ್ರ ಅನ್ವಯಿಸುತ್ತದೆ.



Join Whatsapp