ಕೋವಿಡ್ ಲಸಿಕೆ ಹಾಕಿದ ಪ್ರವಾಸಿಗರಿಗೆ ಆಗಸ್ಟ್ 1 ರಿಂದ ಸೌದಿ ಪ್ರಯಾಣಕ್ಕೆ ಮುಕ್ತ ಅವಕಾಶ

Prasthutha|

ರಿಯಾದ್, ಜುಲೈ 30 : ಸಂಪೂರ್ಣ ಕೋವಿಡ್ ಲಸಿಕೆ ಹಾಕಿದ ಪ್ರವಾಸಿಗರು ತೃತೀಯ ದೇಶದಲ್ಲಿ ಕ್ವಾರಂಟೈನ್ ಆಗದೆ ನೇರವಾಗಿ ಸೌದಿ ಅರೇಬಿಯಾ ಪ್ರವೇಶಿಸಲು ಆಗಸ್ಟ್ 1 ರಿಂದ ಮುಕ್ತ ಅವಕಾಶ ದೊರೆಯಲಿದೆ.

- Advertisement -


ಸೌದಿ ಪ್ರಯಾಣ ಬಯಸುವವರು ನಿರ್ಗಮನದ 72 ಗಂಟೆಯ ಮೊದಲು ನಡೆಸಿದ ಕೋವಿಡ್ ಪಿಸಿಆರ್ ನ ನೆಗೆಟಿವ್ ವರದಿ ಮತ್ತು ಲಸಿಕೆಯ ಪ್ರಮಾಣಪತ್ರವನ್ನು ತಮ್ಮೊಡನೆ ಕೊಂಡು ಹೋಗುವುದು ಕಡ್ಡಾಯವಾಗಲಿದೆ. ಈ ಕುರಿತು ಗುರುವಾರ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಸೌದಿ ಪ್ರವಾಸೋಧ್ಯಮ ಸಚಿವಾಲಯ ಆಗಸ್ಟ್ 1, ಭಾನುವಾರದಿಂದ ಪ್ರವಾಸಿ ವೀಸಾ ಹೊಂದಿರುವ ಪ್ರವಾಸಿಗಳಿಗೆ ಮುಕ್ತವಾಗಿ ಪ್ರಯಾಣ ಬೆಳೆಸಲು ಅವಕಾಶ ನೀಡಲಾಗಿದೆ ಎಂದು ಘೋಷಿಸಿದೆ. ಈ ಹಿಂದೆ ಕೋವಿಡ್ ಸೋಂಕು ಹೆಚ್ಚಾದ ಕಾರಣದಿಂದ ಸೌದಿ ಪ್ರಯಾಣವನ್ನು ತಡೆಹಿಡಿದಿತ್ತು.
ಸೌದಿ ಅರೇಬಿಯಾ ಪ್ರಯಾಣ ಬೆಳೆಸುವವರು ಲಸಿಕೆಯ ದಾಖಲೆಗಳನ್ನು ಅಧಿಕೃತ ವೆಬ್ ಸೈಟ್ ನಲ್ಲಿ ಖಡ್ಡಾಯವಾಗಿ ಅಪ್ಲೋಡ್ ಮಾಡಬೇಕೆಂದು ಅದು ಸ್ಪಷ್ಟಪಡಿಸಿದೆ. ಸೌದಿ ಪ್ರಯಾಣಿಕರು ಶಾಪಿಂಗ್ ಮಾಲ್, ಸಿನೆಮಾ ಹಾಲ್, ಸಾರ್ವಜನಿಕ ಸ್ಥಳ ಭೇಟಿ ಸಂದರ್ಭದಲ್ಲಿ ಈ ದಾಖಲೆಗಳು ಕಡ್ದಾಯವಾಗಲಿದೆ.


ಮಾತ್ರವಲ್ಲ ಸೌದಿ ಆರೋಗ್ಯ ಇಲಾಖೆ ಅಧಿಕೃತಗೊಳಿಸಿದ ಲಸಿಕೆ ಪಡೆದವರಿಗೆ ಪ್ರಮಾಣಪತ್ರಗಳೊಂದಿಗೆ ಸೌದಿ ಪ್ರವೇಶಿಸಬಹುದೆಂದು ಪ್ರವಾಸೋದ್ಯಮ ಸಚಿವಾಲಯ ಖಚಿತಪಡಿಸಿದೆ. ಈ ಸಂದರ್ಭದಲ್ಲಿ ಮಾಸ್ಕ್ ಮತ್ತು ಇನ್ನಿತರ ಕೋವಿಡ್ ಮುಂಜಾಗೃತಾ ಕ್ರಮ ಪಾಲಿಸುವುದು ಕಡ್ದಾಯವಾಗಲಿದೆ ಎಂದು ಸಚಿವಾಲಯದ ಮುಖ್ಯಸ್ಥ ಅಹ್ಮದ್ ಅಲ್ ಖತೀಬ್ ತಿಳಿಸಿದ್ದಾರೆ.

Join Whatsapp