ನವದೆಹಲಿ: ಎಎಪಿ ಸಚಿವ ಸತ್ಯೇಂದರ್ ಜೈನ್ ಅವರು ತಿಹಾರ್ ಜೈಲಿನೊಳಗೆ ಹಾಲಿಡೇ ರೆಸಾರ್ಟ್ ನಂತಹ ಸೌಲಭ್ಯಗಳನ್ನು ಆನಂದಿಸುತ್ತಿದ್ದಾರೆ ಎಂದು ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಟೀಕಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಲೇಖಿ, ತಿಹಾರ್ ಜೈಲಿನಲ್ಲಿ ಮಕ್ಕಳ ಅತ್ಯಾಚಾರ ಆರೋಪಿಯಿಂದ ಜೈನ್ ಮಸಾಜ್ ಪಡೆಯುತ್ತಿರುವ ಮತ್ತೊಂದು ವೀಡಿಯೊವನ್ನು ಉಲ್ಲೇಖಿಸಿದ್ದರಲ್ಲದೆ, ಅಂತಹ ವ್ಯಕ್ತಿಯನ್ನು ನನ್ನ ಹತ್ತಿರ ಬರಲು ಸಹ ನಾನು ಬಿಡುವುದಿಲ್ಲ ಎಂದಿದ್ದಾರೆ.
ಆಮ್ ಆದ್ಮಿ ಪಕ್ಷವನ್ನು (ಎಎಪಿ) ತರಾಟೆಗೆ ತೆಗೆದುಕೊಂಡ ಅವರು, ಇತರರ ಚಾರಿತ್ರ್ಯ ಪ್ರಮಾಣಪತ್ರಗಳನ್ನು ಕೇಳುತ್ತಿದ್ದವರು ಏನೆಂದು ಈಗ ಬಹಿರಂಗಗೊಂಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.