ಸಿಂಗಾಪುರ: ಸಿಂಗಾಪುರ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಪುರುಷರ ಡಬಲ್ಸ್‌ನಲ್ಲಿ ಮಂಗಳವಾರ ಮೊದಲ ಸುತ್ತಿನಲ್ಲೇ ಭಾರತೀಯ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಹೊರಬಿದ್ದಿದ್ದಾರೆ.
ವಿಶ್ವದ ನಂಬರ್ ಒನ್ ಜೋಡಿಯಾದ ಇವರನ್ನು 34ನೇ ವಿಶ್ವ ರ್ಯಾಂಕಿಂಗ್‌ನಲ್ಲಿರುವ ಡೆನ್ಮಾರ್ಕ್‌ನ ಡೇನಿಯಲ್ ಲಂಜಾರ್ಡ್ ಮತ್ತು ಮ್ಯಾಡ್ಸ್ ವೆಸ್ಟರ್ಗಾರ್ಡ್ 22-20, 21-18 ಗೇಮ್ಗಳಿಂದ ಸೋಲಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ ಥಾಯ್ಲೆಂಡ್ ಓಪನ್ ಪ್ರಶಸ್ತಿ ಗೆದ್ದಿರುವ ಭಾರತೀಯ ಜೋಡಿಯ ಮೇಲೆ ಅಭಿಮಾನಿಗಲು ಭಾರಿ ನಿರೀಕ್ಷೆ ಇಟ್ಟಕೊಂಡಿದ್ದರು. ಆದರೆ ಸಿಂಗಾಪುರದಲ್ಲಿ ಆರಂಭಿಕ ಸುತ್ತಿನಲ್ಲೇ ಹೊರಬಿದ್ದಿರುವುದು ಅವರಿಗೆ ಆಘಾತಕಾರಿಯಾಗಿದೆ.
ಸಿಂಗಲ್ಸ್‌ನಲ್ಲೂ ಆಕರ್ಷಿ ಕಶ್ಯಪ್ ಮತ್ತು ಪ್ರಿಯಾಂಶು ರಾಜವತ್ ಕೂಡ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದು ಭಾರತೀಯ ಕ್ರೀಡಾಭಿಮಾನಿಗಳಿಗೆ ನಿರಾಸೆ ತಂದಿದೆ.
ಮಹಿಳೆಯರ ಸಿಂಗಲ್ಸ್ ನಲ್ಲಿಈ ತಿಂಗಳ ಆರಂಭದಲ್ಲಿ ಥಾಯ್ಲೆಂಡ್ ಓಪನ್ ಪ್ರಶಸ್ತಿ ಗೆದ್ದಿರುವ ಭಾರತೀಯ ಜೋಡಿಯು ಸಿಂಗಾಪುರದಲ್ಲಿ ಆರಂಭಿಕ ಸುತ್ತಿನಲ್ಲೇ ಹೊರಬಿದ್ದಿರುವುದು ಅಭಿಮಾನಿಗಳಿಗೆ ಆಘಾತಕಾರಿಯಾಗಿದೆ.
ಅದೇ ವೇಳೆ, ಸಿಂಗಲ್ಸ್ ನಲ್ಲೂ ಭಾರತಕ್ಕೆ ನಿರಾಶೆ ಕಾದಿತ್ತು. ಆಕರ್ಷಿ ಕಶ್ಯಪ್ ಮತ್ತು ಪ್ರಿಯಾಂಶು ರಾಜವತ್ ಕೂಡ ಮೊದಲ ಸುತ್ತಿನಲ್ಲೇ ಹೊರಬಿದ್ದರು.
ಮಹಿಳೆಯರ ಸಿಂಗಲ್ಸ್ ನಲ್ಲಿ 41ನೇ ವಿಶ್ವ ರ್ಯಾಂಕಿಂಗ್‌ನ ಆಕರ್ಷಿ ಕಶ್ಯಪ್‌ರನ್ನು ಥಾಯ್ಲೆಂಡ್‌ನ 42ನೇ ವಿಶ್ವ ರ್ಯಾಂಕಿಂಗ್‌ನ ಪೊರ್ನ್ಪಿಚ ಚೋಕೀವೊಂಗ್ 21-7, 21-15 ಗೇಮ್ಗಳಿಂದ ಸೋಲಿಸಿದ್ದಾರೆ. 41ನೇ ವಿಶ್ವ ರ್ಯಾಂಕಿಂಗ್‌ನ ಆಕರ್ಷಿ ಕಶ್ಯಪ್‌ರನ್ನು ಥಾಯ್ಲೆಂಡ್‌ನ 42ನೇ ವಿಶ್ವ ರ್ಯಾಂಕಿಂಗ್‌ನಲ್ಲಿರುವ ಪೊರ್ನ್ಪಿಚ ಚೋಕೀವೊಂಗ್ 21-7, 21-15 ಗೇಮ್ಗಳಿಂದ ಪರಾಭವಗೊಳಿಸಿದ್ದಾರೆ.