ಮಂಗಳೂರು: ಸ್ಥಳೀಯರಿಗೆ ಆದ್ಯತೆ ನೀಡದ ಕೈಗಾರಿಕೆ ವಿರುದ್ಧ ಸರಕಾರದಿಂದ ಕ್ರಮ – ಮುರುಗೇಶ್ ನಿರಾಣಿ

Prasthutha|

ಮಂಗಳೂರು: ಡಾ. ಸರೋಜಿನಿ ಮಹಿಷಿ ವರದಿ ಪ್ರಕಾರ ಬೃಹತ್ ಕೈಗಾರಿಕಾ ಕಂಪೆನಿಗಳು ಶೇಕಡಾ 70ರಷ್ಟು ಉದ್ಯೋಗವನ್ನು ಸ್ಥಳೀಯರಿಗೆ ನೀಡಬೇಕು. ಒಂದು ವೇಳೆ ನೀಡದೇ ಇದ್ದಲ್ಲಿ ಅಂತಹ ಕಂಪೆನಿಗಳ ವಿರುದ್ಧ ಕಾರ್ಮಿಕ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ರಾಜ್ಯ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.

- Advertisement -

ಇತ್ತೀಚೆಗೆ MRPL ಕಂಪೆನಿಯ ನೇಮಕಾತಿ ಸಮಯದಲ್ಲಿ ಹೊರರಾಜ್ಯದ ಮಂದಿಗೆ ಹೆಚ್ಚಿನ ಅವಕಾಶ ನೀಡಲಾಗಿದೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಕೈಗಾರಿಕೆಗಳ ನೇಮಕಾತಿಯಲ್ಲಿ ಡಿ’ ದರ್ಜೆ ನೌಕರಿಯಲ್ಲಿ ಸ್ಥಳೀಯರಿಗೆ ಶೇಕಡಾ 100ರಷ್ಟು ಮೀಸಲಿದ್ದರೆ, ಇತರೆ ವಿಭಾಗದಲ್ಲಿ ಶೇಕಡಾ 70ರಷ್ಟು ಸ್ಥಳೀಯರಿಗೆ ಅವಕಾಶವಿರುತ್ತದೆ. ಅದರಲ್ಲೂ ಕೈಗಾರಿಕೆ ನಿರ್ಮಾಣದ ವೇಳೆ ಭೂಮಿ, ಮನೆ ಕಳೆದುಕೊಂಡವರಿಗೆ ಹಾಗೂ ಅವರ ಕುಟುಂಬಿಕರ ಶಿಕ್ಷಣಕ್ಕೆ ಅನುಗುಣವಾಗಿ ಕೆಲಸ ನೀಡಲಾಗುತ್ತಾ ಬರಲಾಗಿದೆ. MRPL, MCF ಕಂಪೆನಿಗಳಲ್ಲಿ ಸ್ಥಳೀಯರಿಗೆ ಅವಕಾಶ ನೀಡಲಾಗಿಲ್ಲ ಅನ್ನೋದಾಗಿ ಹೇಳುತ್ತಿದ್ದಾರೆ ಹೊರತು, ಅದಕ್ಕೆ ದಾಖಲೆ ಕೊಟ್ಟಿಲ್ಲ. ಈ ಬಗ್ಗೆ ನಿಮ್ಮಲ್ಲಿ ಲಿಸ್ಟ್ ಇದ್ದರೆ ಕೊಡಿ ಇಂದೇ ಅವರ ಜೊತೆ ಮಾತಾಡುತ್ತೇನೆ. ಒಂದು ವೇಳೆ ಹಾಗೇನಾದರೂ ಇದ್ದರೆ ಸರಕಾರವು ಕಾಯ್ದೆ ಅನ್ವಯ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು.

ಇನ್ನು ಅಪೆಕ್ಸ್ ಬ್ಯಾಂಕ್ ಜೊತೆ ಡಿಸಿಸಿ ಬ್ತಾಂಕ್ ಗಳ ವಿಲೀನದ ಬಗ್ಗೆ ಮಾತನಾಡಿದ ಸಚಿವ ನಿರಾಣಿ, ಆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ನಾನೂ ಪೇಪರ್ ನಲ್ಲಷ್ಟೇ ಓದಿದ್ದೇನೆ. ಯಾವ ಪ್ರಕಾರ ವಿಲೀನವಾಗಲಿದೆ ಅನ್ನೋದು ತಿಳಿದಿಲ್ಲ. ಮೊನ್ನೆ ನಡೆದ ಸಹಕಾರ ಸಮಾವೇಶದಲ್ಲೂ ಅಮಿತ್ ಶಾ ಅವರು ಈ ಬಗ್ಗೆ ಮಾತಾಡಿಲ್ಲ ಎಂದು ಸಮಜಾಯಿಷಿ ನೀಡಿದರು.



Join Whatsapp