ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕಗಳನ್ನು ಪಡೆದ ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್‌ರಿಗೆ ತರಬೇತಿ ನೀಡಿರುವ ರಾಷ್ಟ್ರೀಯ ಪಿಸ್ತೂಲ್ ಶೂಟಿಂಗ್ ಕೋಚ್ ಸಮರೇಶ್ ಜಂಗ್‌ಗೆ ಮನೆಧ್ವಂಸ ಭೀತಿ ಎದುರಾಗಿದೆ. ನಿಮ್ಮ ಹಾಗೂ ನಿಮ್ಮ ವಠಾರದ ಎಲ್ಲ ಮನೆಗಳನ್ನು ಎರಡು ದಿನಗಳಲ್ಲಿ ಧ್ವಂಸಗೊಳಿಸಲಾಗುವುದು ಎಂದು ಅವರಿಗೆ ಮತ್ತು ನೆರೆಯವರಿಗೆ ನೋಟಿಸ್ ನೀಡಲಾಗಿದೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕಗಳನ್ನು ಪಡೆದ ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್‌ರಿಗೆ ತರಬೇತಿ ನೀಡಿರುವ ಸಂಭ್ರಮದಿಂದ ಮನೆಗೆ ಮರಳಿದಾಗ ಅವರಿಗೆ ಈ ಆಘಾತ ಎದುರಾಗಿದೆ.
ನವದೆಹಲಿಯ ಸಿವಿಲ್ ಲೈನ್ಸ್ ಪ್ರದೇಶದ ಖೈಬರ್ ಪಾಸ್‌ನಲ್ಲಿರುವ ಮನೆಯನ್ನು ಧ್ವಂಸಗೊಳಿಸಲಾಗುವುದು ಎಂಬ ನೋಟಿಸನ್ನು ಅವರಿಗೆ ಮತ್ತು ಅವರ ನೆರೆಯ ಮನೆಗಳಿಗೂ ನೀಡಲಾಗಿದೆ.
ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಭೂಮಿ ಮತ್ತು ಅಭಿವೃದ್ಧಿ ಕಚೇರಿಯು ಈ ನೋಟಿಸ್‌ಗಳನ್ನು ನೀಡಿದೆ. ಖೈಬರ್ ಪಾಸ್ ಬಡಾವಣೆಯನ್ನು ರಕ್ಷಣಾ ಸಚಿವಾಲಯಕ್ಕೆ ಸೇರಿದ ಜಮೀನಿನಲ್ಲಿ ನಿರ್ಮಿಸಲಾಗಿದೆ, ಹಾಗಾಗಿ, ಈ ಕಟ್ಟಡಗಳು ಅಕ್ರಮವಾಗಿವೆ ಎಂಬುದಾಗಿ ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಇದಕ್ಕೆ ಅಚ್ಚರಿ ವ್ಯಕ್ತಪಡಿಸಿದ ಸಮರೇಶ್ ಜಂಗ್, ಇಡೀ ಬಡಾವಣೆಯೇ ಅಕ್ರಮ ಎಂಬುದಾಗಿ ಅವರು ಘೋಷಿಸಿದ್ದಾರೆ. ನನ್ನ ಕುಟುಂಬವು 1950ರ ದಶಕದಿಂದಲೂ 75 ವರ್ಷಗಳಿಂದ ಇಲ್ಲೇ ವಾಸಿಸುತ್ತಿದೆ. ನ್ಯಾಯಾಲಯದಲ್ಲಿಯೂ ನಮ್ಮ ಅರ್ಜಿಯನ್ನು ತಿರಸ್ಕರಿಸಲಾಗಿದೆ’ ಎಂದು ಹೇಳಿದರು.
ಎರಡು ದಿನಗಳಲ್ಲಿ ಮನೆ ತೊರೆಯುವಂತೆ ನಮಗೆ ಸೂಚಿಸಲಾಗಿದೆ. ನಮಗೆ ಸ್ವಲ್ಪ ಸಮಯ ಬೇಕು. ನಾಳೆ ನಾವು ಮನೆಯನ್ನು ತೊರೆಯಬೇಕೆಂದು ನೀವು ಇವತ್ತು ಹೇಳಿದರೆ, ಹಾಗೆ ಮಾಡಲು ನಮಗೆ ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ
ಅರ್ಜುನ ಪ್ರಶಸ್ತಿ ವಿಜೇತ ಜಂಗ್, 2006ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 5 ಚಿನ್ನ, ಒಂದು ಬೆಳ್ಳಿ ಮತ್ತು ಒಂದು ಕಂಚಿನ ಪದಕಗಳನ್ನು ಗೆದ್ದಿದ್ದರು.