ಪುತ್ತೂರು: ‘ಮನೆಗೊಂದು ಮರ, ಊರಿಗೊಂದು ವನ’ಎಂಬ ಘೋಷವಾಕ್ಯದಡಿ ಬದ್ರಿಯಾ ಗಲ್ಫ್ ಫ್ರೆಂಡ್ಸ್ ಸಂಟ್ಯಾರ್ ವತಿಯಿಂದ ಬದ್ರಿಯಾ ಜುಮಾ ಮಸೀದಿ ಸಂಟ್ಯಾರಿನಲ್ಲಿ ಜಮಾಅತ್ ಪ್ರತೀ ಮನೆಗೆ ಸಸಿ ವಿತರಣೆ ನಡೆಸಿದ್ದಾರೆ.
ಪರಿಸರ ಸಂರಕ್ಷಣೆ ಹಾಗೂ ಮರ ಗಿಡಗಳ ಪ್ರಾಮುಖ್ಯತೆಯನ್ನು ಮನಗಂಡು ಅನಿವಾಸಿ ಭಾರತೀಯರ ತಂಡವಾದ ಬದ್ರಿಯಾ ಗಲ್ಫ್ ಫ್ರೆಂಡ್ಸ್ ವತಿಯಿಂದ ಸಂಟ್ಯಾರ್ ಮೊಹಲ್ಲಾದ ಪ್ರತಿಯೊಂದು ಮನೆಗೆ ಸಸಿ ವಿತರಣೆ ನಡೆಸುವ ಯೋಜನೆ ರೂಪಿಸಿದ್ದರು. ಅದರಂತೆ ಸಂಟ್ಯಾರ್ ಮಸೀದಿ ವಠಾರದಲ್ಲಿ ಸಸಿ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬದ್ರಿಯಾ ಜುಮಾ ಮಸೀದಿ ಸಂಟ್ಯಾರು ಖತೀಬರಾದ ಅಬ್ದುಲ್ ಲತೀಫ್ ಹನೀಫಿ, ಪರಿಸರ ಸಂರಕ್ಷಣೆಯ ಮಹತ್ವವನ್ನು ವಿವರಿಸಿದರು. ಮಸೀದಿ ಆಡಳಿತ ಸಮಿತಿ ಅಧ್ಯಕ್ಷರಾದ ಫಾರೂಕ್ ಸಂಟ್ಯಾರ್, ಕಾರ್ಯದರ್ಶಿ ಹಮೀದ್ ಕಲ್ಲರ್ಪೆ, ಜೊತೆ ಕಾರ್ಯದರ್ಶಿ ಮಹಮ್ಮದ್ ಮಲಾರ್ , ಸದಸ್ಯರಾದ ರಝಾಕ್ ಸಂಟ್ಯಾರ್, ಹಾರಿಸ್ ಸಂಟ್ಯಾರ್, ಸಿ ಎಮ್ ಅಬ್ದುಲ್ಲಾ ಮುಸ್ಲಿಯಾರ್ , ಸಂಶುದ್ದೀನ್ ಕಲ್ಲರ್ಪೆ, ಬದ್ರಿಯಾ ಗಲ್ಫ್ ಫ್ರೆಂಡ್ಸ್ ಸದಸ್ಯರಾದ ಖಾದರ್ ಮರಿಕೆ, ಉಮರ್ ನೀರ್ಕಜೆ, ನಾಸಿರ್ ಬೊಳ್ಳೆಮ್ಮಾರ್, ಅನ್ಸಾರಿಯಾ ಯಂಗ್ಮೆನ್ಸ್ ಎಸೋಸಿಯೇಶನ್ ಅಧ್ಯಕ್ಷರಾದ ಪವಾಝ್ ಮರಿಕೆ ಮತ್ತು ಮಸೀದಿ ಆಡಳಿತ ಕಮಿಟಿ ಸದಸ್ಯರು, ಯಂಗ್‌ಮೆನ್ಸ್ ಸದಸ್ಯರು, ಜಮಾಅತಿಗರು ಉಪಸ್ಥಿತರಿದ್ದರು. ಜಮಾಅತ್ ಕಮಿಟಿ ಸದಸ್ಯರಾದ ರಿಯಾಝ್ ಬಳಕ್ಕ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.