ಪೊಲೀಸರಿಂದ ಸ್ಯಾಂಟ್ರೋ ರವಿ ಆಪ್ತನ ತೀವ್ರ ವಿಚಾರಣೆ

Prasthutha|

ಮೈಸೂರು: ವಂಚನೆ, ಬೆದರಿಕೆ, ವೇಶ್ಯಾವಾಟಿಕೆ ದಂಧೆ ಇನ್ನಿತರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಸ್ಯಾಂಟ್ರೋ ರವಿಯ ಆಪ್ತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

- Advertisement -

ಮಹಿಳೆಗೆ ಮತ್ತು ಬರಿಸುವ ಔಷಧಿ ಬೆರೆಸಿದ್ದ ಆರೋಪದ ಮೇಲೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ಪೊಲೀಸರ ತಂಡ ರವಿ ಆಪ್ತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದೆ.

ಇನ್ನೊಂದೆಡೆ, ಸ್ಯಾಂಟ್ರೋ ರವಿಗೆ ಮಹಿಳೆಯ ಜೊತೆ ಮದುವೆ ಮಾಡಿಸಿದ್ದ ಪುರೋಹಿತರನ್ನು ಕೂಡ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ರಾಜ್ಯ ರಾಜಕೀಯದಲ್ಲಿ ಭಾರೀ ಸುದ್ದು ಮಾಡುತ್ತಿರುವ ಸ್ಯಾಂಟ್ರೋ ರವಿಯ ಭಯಾನಕ ಸಂಗತಿಗಳು ಒಂದೊಂದಾಗಿ ಬಯಲಾಗತೊಡಗಿವೆ.

- Advertisement -

ಮೊಬೈಲ್ ಫೋನಲ್ಲೇ ಚೆಂದದ ಯುವತಿಯರನ್ನು ಬುಕಿಂಗ್ ಮಾಡಿ ದೊಡ್ಡ ದೊಡ್ಡ ಬಂಗಲೆ, ಡ್ಯೂಪ್ಲೆಕ್ಸ್ ಮನೆಗಳು, ಪೆಂಟ್’ಹೌಸ್ ಗಳು, ವಿಲ್ಲಾಗಳು ಹೀಗೆ, ಐಷಾರಾಮಿ ಮನೆಗಳನ್ನು ಬಾಡಿಗೆ ಪಡೆದು ವೇಶ್ಯಾವಾಟಿಕೆ ಅಡ್ಡೆ ಮಾಡಿಕೊಳ್ಳುತ್ತಿದ್ದ ಸ್ಯಾಂಟ್ರೋ ರವಿ ದೆಹಲಿ, ಮುಂಬೈ ಕೋಲ್ಕತ್ತಾ ಹಾಗೂ ಇರಾನ್ ಮತ್ತು ರಷ್ಯಾ ಮುಂತಾದ ವಿದೇಶಗಳಿಂದಲೂ ಯುವತಿಯರನ್ನು ಕರೆಸಿಕೊಳ್ಳುತ್ತಿದ್ದ ಎಂಬ ಮಾಹಿತಿ ಇದೆ.

ತನ್ನ ಕೆಲಸಗಳಿಗೆ ಸಹಕರಿಸಿದ ಯುವತಿಯರಿಗೆ ದುಬಾರಿ ಗಿಫ್ಟ್ ಗಳನ್ನೂ ಈತ ಕೊಡುತ್ತಿದ್ದ ಎನ್ನಲಾಗಿದೆ.

Join Whatsapp