ಮುಗ್ಧ ಜನರನ್ನು ಸಿಲುಕಿಸಲು ಯತ್ನ ಆರೋಪ: ಗುಜರಾತ್ ಕೇಸ್ ನಲ್ಲಿ ಸಂಜೀವ್‌ ಭಟ್‌ ಮತ್ತೆ ಬಂಧನ

Prasthutha|

►ಗುಜರಾತ್ ಹತ್ಯಾಕಾಂಡದಲ್ಲಿ ಧ್ವನಿಎತ್ತಿದ ತೀಸ್ತಾ ಸೆಟಲವಾಡ್‌, ಶ್ರೀಕುಮಾರ್ ನಂತರ ಮೂರನೇ ಬಂಧನ

- Advertisement -

ಅಹ್ಮದಾಬಾದ್: 2002ರ ಗೋಧ್ರೋತ್ತರ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ‘ಮುಗ್ಧ’ ಜನರನ್ನು ಸಿಲುಕಿಸಲು ಯತ್ನಿಸಿದ ಆರೋಪದಲ್ಲಿ ಈಗಾಗಲೇ ಜೈಲಲ್ಲಿರುವ ಐಪಿಎಸ್‌ ಅಧಿಕಾರಿ ಸಂಜೀವ್‌ ಭಟ್‌ ಅವರನ್ನು ವಿಶೇಷ ತನಿಖಾ ದಳ (ಎಸ್‌ಐಟಿ) ಮತ್ತೆ ಬಂಧಿಸಿದೆ.

ಸಂಜೀವ್‌ ಭಟ್‌ ಅವರು ಪ್ರಕರಣಕ್ಕೆ ಸಂಬಂಧಿಸಿ ಎಸ್ಐಟಿಯಿಂದ ಬಂಧನಕ್ಕೆ ಒಳಪಟ್ಟ ಮೂರನೇ ಆರೋಪಿ. ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲವಾಡ್‌ ಮತ್ತು ಗುಜರಾತ್‌ನ ಮಾಜಿ ಡಿಜಿಪಿ ಆರ್‌.ಬಿ.ಶ್ರೀಕುಮಾರ್ ಅವರನ್ನು ಈಗಾಗಲೇ ಬಂಧಿಸಲಾಗಿದೆ. ಪಲನ್‌ಪುರ್‌ ಜೈಲಿನಲ್ಲಿದ್ದ ಸಂಜೀವ್‌ ಭಟ್‌ ಅವರನ್ನು ವರ್ಗಾವಣೆ ವಾರಂಟ್‌ ಮೂಲಕ ವಶಕ್ಕೆ ಪಡೆಯಲಾಗಿದೆ.

- Advertisement -

1996ರಲ್ಲಿ ಗುಜರಾತ್‌ನ ಬನಾಸಕಾಂಠಾ ಜಿಲ್ಲೆಯಲ್ಲಿ ಮಾದಕ ವಸ್ತು ಹೊಂದಿದ ಸುಳ್ಳು ಆರೋಪದ ಮೇಲೆ ವಕೀಲರೊಬ್ಬರನ್ನು ಬಂಧಿಸಿದ ಪ್ರಕರಣ ಸಂಬಂಧಿಸಿ ಸಂಜೀವ್‌ ಭಟ್‌ 2018ರಿಂದ ಪಲನ್‌ಪುರ್‌ ಜೈಲಿನಲ್ಲಿದ್ದರು ಘಟನೆ ನಡೆದ ಸಂದರ್ಭದಲ್ಲಿ ಸಂಜೀವ್‌ ಭಟ್‌ ಬನಾಸಕಾಂಠಾ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿದ್ದರು. ಇದಕ್ಕೂ ಮೊದಲು 1990ರಲ್ಲಿ ಕಸ್ಟಡಿಯಲ್ಲಿದ್ದ ವ್ಯಕ್ತಿಯ ಸಾವಿನ ಪ್ರಕರಣ ಸಂಬಂಧ ಇವರಿಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.

2002ರ ಗೋಧ್ರೋತ್ತರ ಗಲಭೆ ಪ್ರಕರಣದಲ್ಲಿ ಮೋದಿ ಮತ್ತಿತರಿಗೆ ಸುಪ್ರೀಂ ಕೋರ್ಟ್ ಕ್ಲೀನ್ ಚಿಟ್ ನೀಡಿತ್ತು. ಮತ್ತು ಮುಗ್ಧ ಜನರನ್ನು ಸಿಲುಕಿಸುವ ಯತ್ನದ ಪ್ರಕರಣದಲ್ಲಿ ತೀಸ್ತಾ, ಶ್ರೀಕುಮಾರ್‌ ಮತ್ತು ಸಂಜೀವ್‌ ಭಟ್‌ ಅವರ ಪಾತ್ರದ ಬಗ್ಗೆ ತನಿಖೆ ನಡೆಸಲು ಗುಜರಾತ್‌ ಸರ್ಕಾರ ಕಳೆದ ತಿಂಗಳು ಎಸ್‌ಐಟಿಯನ್ನು ನೇಮಿಸಿದ್ದು, ಇದೀಗ ಮೂರನೇ ಬಂಧನವಾಗಿದೆ.



Join Whatsapp