ಬೆಳಗಾವಿ: ಬೆಳಗಾವಿಯಲ್ಲಿ ಬಿಜೆಪಿ ಮಾಜಿ ಶಾಸಕ ಸಂಜಯ್ ಪಾಟೀಲ್, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನೈಟ್ ಪಾಲಿಟಿಕ್ಸ್ ಮಾಡಿ ಗೆದ್ದು ಬಂದವರಾಗಿದ್ದಾರೆ. ರಾತ್ರಿ ರಾಜಕಾರಣ ಮಾಡುವ ಸಂಸ್ಕೃತಿ ಬಿಜೆಪಿಯದ್ದಲ್ಲ, ಆದರೆ ಅದನ್ನು ಬಿಜೆಪಿ ಮೇಲೆ ಹಾಕುವುದಕ್ಕೆ ನೋಡುತ್ತಿದ್ದಾರೆ ಎಂದು ನಾಲಗೆ ಹರಿಯ ಬಿಟ್ಟಿದ್ದಾರೆ.
ಲಕ್ಷ್ಮಿ ಹೆಬ್ಬಾಳ್ಕರ್ ಗೆ ಸತ್ಯ ಎದುರಿಸುವ ಶಕ್ತಿ ಇಲ್ಲ. ಶಾಸಕಿ ಆಗುವ ಮೊದಲು ನಾನು ನಿಮ್ಮ ಮಗಳು ಎಂದಿದ್ದರು. ಚಾಂದ್ ತಾರೆ ತೋಡ್ ಕೇ ಲಾವೂಂಗಿ ಎಂದು ಹೇಳಿದ್ರು. ಕ್ಷೇತ್ರದ ಅಭಿವೃದ್ಧಿಗಾಗಿ ಭರವಸೆಗಳ ಮಹಾಪೂರವನ್ನೇ ಹರಿಸಿದ್ದರು. ಆದರೆ ಗೆದ್ದು ಬಂದ ಮೇಲೆ ಯಾವುದೇ ಅಭಿವೃದ್ಧಿ ಕೆಲಸ ಮಾಡಲಿಲ್ಲ. ಈಗ ಭಾವನಾತ್ಮಕ ವಿಚಾರವಾಗಿ ರಾಜಕಿಯ ಮಾಡಲು ಹೊರಟಿದ್ದಾರೆ ಎಂದು ಕಿಡಿಗಾರಿದ್ದಾರೆ.
ಮಹಿಳಾ ಶಾಸಕಿ ವಿರುದ್ಧ ಬಿಜೆಪಿ ಮುಖಂಡನ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದ್ದು, ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜಕೀಯ ಟೀಕೆ ಸರಿ, ಆದರೆ ವೈಯಕ್ತಿಕವಾಗಿ ನಿಂದಿಸುವುದ ಬಿಜೆಪಿಯ ಸಂಸ್ಕೃತಿ ಎಂದು ಕಾಂಗ್ರೆಸ್ ಹೇಳಿದೆ.