ಕರ್ತವ್ಯ ನಿರ್ಲಕ್ಷ್ಯ | 12 ಮಕ್ಕಳಿಗೆ ಪೋಲಿಯೊ ಲಸಿಕೆ ಬದಲು ಸ್ಯಾನಿಟೈಸರ್ ನೀಡಿದ ಸಿಬ್ಬಂದಿ

Prasthutha|

ಮುಂಬೈ : ಮಹಾರಾಷ್ಟ್ರದ ಯವತ್ಮಲ್ ನ ಆರೋಗ್ಯ ಕೇಂದ್ರದ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ, ಕಳೆದ ಭಾನುವಾರ ನಡೆದ ಪೊಲೀಯೊ ಲಸಿಕೆ ವೇಳೆ, ಪೋಲಿಯೊ ಲಸಿಕೆ ಬದಲು ಸ್ಯಾನಿಟೈಸರ್ ಬಳಸಿದ ಬಗ್ಗೆ ವರದಿಯಾಗಿದೆ. ಸಮಾರು 12 ಮಕ್ಕಳಿಗೆ ಪೋಲಿಯೊ ಲಸಿಕೆ ಬದಲು ಸ್ಯಾನಿಟೈಸರ್ ಬಳಸಲಾಗಿದೆ ಎಂದು ವರದಿಯಾಗಿದೆ.

- Advertisement -

ಮಕ್ಕಳನ್ನು ಯವತ್ಮಲ್ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲಾ ಮಕ್ಕಳು ಆರೋಗ್ಯವಾಗಿವೆ, ಆದರೆ 48 ಗಂಟೆಗಳ ಕಾಲ ನಿಗಾದಲ್ಲಿರಿಸಲಾಗಿದೆ.

ಈ ನಿರ್ಲಕ್ಷ್ಯಕ್ಕೆ ಕಾರಣರಾದ ಸಿಬ್ಬಂದಿಯನ್ನು ಅಮಾನತುಗೊಳಿಸಿ, ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

ಘಟಂಜಿ ತಾಲೂಕಿನ ಬಂಭೋರ ಸಾರ್ವಜನಿಕ ಆರೋಗ್ಯ ಕೇಂದ್ರದ ಕಪ್ಸಿ ಉಪ ಕೇಂದ್ರದಲ್ಲಿ 12 ಮಕ್ಕಳಿಗೆ ಪೋಲಿಯೊ ಲಸಿಕೆ ಬದಲು 2 ಡ್ರಾಪ್ ಸ್ಯಾನಿಟೈಸರ್ ನೀಡಲಾಗಿತ್ತು. ಮಧ್ಯಾಹ್ನ 2 ಗಂಟೆ ವೇಳೆ ಕರ್ತವ್ಯದಲ್ಲಿದ್ದ ಸಿಬ್ಬಂದಿಗೆ ಮಕ್ಕಳಿಗೆ ನೀಡಿದ್ದು, ಸ್ಯಾನಿಟೈಸರ್ ಎಂಬುದು ಗೊತ್ತಾಗಿದೆ. ಮತ್ತೆ ಹೆತ್ತವರನ್ನು ಕರೆಸಿ, ಪೋಲಿಯೊ ಲಸಿಕೆ ನೀಡಲಾಗಿದೆ. ಈ ಬಗ್ಗೆ ಸ್ಥಳೀಯ ಸರಪಂಚರು ಉನ್ನತಾಧಿಕಾರಿಗಳಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಮಕ್ಕಳನ್ನು ಯವತ್ಮಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.  



Join Whatsapp