ನವದೆಹಲಿ: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಝಾ ತಮ್ಮ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ
ಮುಂದಿನ ತಿಂಗಳು ದುಬೈ ಟೆನಿಸ್ ಚಾಂಪಿಯನ್’ಶಿಪ್’ನಲ್ಲಿ ಆಡುವುದಾಗಿ ಸಾನಿಯಾ ಹೇಳಿದ್ದಾರೆ. ಈ ಚಾಂಪಿಯನ್’ಶಿಪ್ ಸಾನಿಯಾ ವೃತ್ತಿಜೀವನದ ಕೊನೆಯ ಪಂದ್ಯಾವಳಿಯಾಗಿದೆ. ಈ ದುಬೈ ಟೆನಿಸ್ ಚಾಂಪಿಯನ್’ಶಿಪ್ ಫೆಬ್ರವರಿ 19 ರಂದು ಆರಂಭವಾಗಲಿದೆ. ಇದು WTA 1000 ಈವೆಂಟ್ ಆಗಿರುತ್ತದೆ. ಈ ಟೂರ್ನಿಯಲ್ಲಿ ಸಾನಿಯಾ ಕೊನೆಯ ಬಾರಿಗೆ ತಮ್ಮ ಅಭಿಮಾನಿಗಳ ಜೊತೆ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. 2022ರ ಅಂತ್ಯದಲ್ಲಿ ನಿವೃತ್ತಿ ಹೊಂದುವುದಾಗಿ ಸಾನಿಯಾ ಕಳೆದ ವರ್ಷವೇ ಘೋಷಿಸಿದ್ದರು. ಇದೀಗ ಸಾನಿಯಾ ಮಿರ್ಜಾ ಈ ವರ್ಷದ ಮೊದಲ ಗ್ರ್ಯಾನ್ ಸ್ಲಾಮ್ ಆಸ್ಟ್ರೇಲಿಯನ್ ಓಪನ್ ಆಡಲಿದ್ದಾರೆ. ಇದಾದ ಬಳಿಕ ಯುಎಇಯಲ್ಲಿ ಚಾಂಪಿಯನ್ ಶಿಪ್ ಆಡಿದ ಬಳಿಕ ಟೆನಿಸ್ ಗೆ ವಿದಾಯ ಹೇಳಲಿದ್ದಾರೆ.