ಕೇರಳ ಬೋಟ್ ದುರಂತ| ಸಂಘಪರಿವಾರದ ಕಾರ್ಯಕರ್ತರಿಂದ ಕೋಮು ಭಾವನೆ ಕೆರಳಿಸುವ ಕಾಮೆಂಟ್!

Prasthutha|

- Advertisement -

ಮಲಪ್ಪುರಂ: ಕೇರಳದ ಮಲಪ್ಪುರಂ ಜಿಲ್ಲೆಯ ತಾನೂರ್ ಎಂಬಲ್ಲಿ ಪ್ರವಾಸಿಗರು ತೆರಳುತ್ತಿದ್ದ ಬೋಟ್ ಪಲ್ಟಿಯಾಗಿ ಮಕ್ಕಳು ಸೇರಿದಂತೆ 22 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ.

ಬೋಟ್ ಅಪಘಾತದ ಸುದ್ದಿಗಳು ಹರಡುತ್ತಿದ್ದಂತೆಯೇ ಸಂಘಪರಿವಾರದ ಕಾರ್ಯಕರ್ತರು ತಮ್ಮ ಚಾಳಿಯನ್ನು ಮುಂದುವರಿಸಿದ್ದು, ಮುಸ್ಲಿಂ ಬಾಹುಳ್ಯವಿರುವ ಮಲಪ್ಪುರಂನಲ್ಲಿ ಅಪಘಾತ ನಡೆದಿರುವುದು ಒಳ್ಳೆಯದಾಗಿದೆ ಎನ್ನುವ ರೀತಿಯಲ್ಲಿ ಕಾಮೆಂಟ್ ಹಾಕಿದ್ದಾರೆ.

- Advertisement -

ನಿಖಿಲ್ ನೇಮಮ್ ಎಂಬ ಹೆಸರಿನ ಬಳಕೆದಾರನ ಖಾತೆಯಿಂದ “ಅಪಘಾತ ಸಂಭವಿಸಿರುವುದು ಮಲಪ್ಪುರಂನಲ್ಲಿ ಅಲ್ವಾ? ಯಾವುದೇ ತೊಂದರೆ ಇಲ್ಲ!” ಎಂದು ಒಂದು ಸಮುದಾಯವನ್ನು ಅಣಕಿಸುತ್ತಾ ಕೋಮು ಭಾವನೆಯನ್ನು ಕೆರಳಿಸುವ ಕಾಮೆಂಟ್ ಬಂದಿದ್ದು, ಇಂತಹಾ ಸಂದರ್ಭಗಳಲ್ಲೂ ಕೋಮು ಪ್ರೇರಿತ ಕಾಮೆಂಟ್‌ಗಳನ್ನು ಹಾಕುವವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯಗಳು ಕೇಳಿ ಬರುತ್ತಿದೆ.