ಗುಲ್ಬರ್ಗಾ: ಇಲ್ಲಿನ ಮೆಹಬೂಸ್ ಮಸೀದಿಯ ಮುಂಭಾಗದಲ್ಲಿ ಗಣೇಶ ಚತುರ್ಥಿ ಮೆರವಣಿಗೆಯಲ್ಲಿ ಜೋರಾಗಿ ಧ್ವನಿವರ್ಧಕ ಬಳಸಿ ನಿಯಮ ಉಲ್ಲಂಘಿಸಿದ್ದ ವೀಡಿಯೋ ವೈರಲ್ ಆದ ಬೆನ್ನಲ್ಲೇ ಪೊಲೀಸರು ಡಿಜೆ ಮತ್ತು ಕಾರ್ಯಕ್ರಮದ ಆಯೋಜಕರು ಸೇರಿದಂತೆ ನಾಲ್ವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವೀಡಿಯೋದಲ್ಲಿ “ಖೂನ್ ಸೆ ಇಸ್ ಧರ್ತಿ ಕೋ ಹಮ್ ನೆಹ್ಲಾಯೇಂಗೆ, ಹಮ್ ತುಝ್ಕೊ ತೇರಿ ಅವ್ಕಾತ್ ಬತಾಯೆಂಗೆ ” ಎಂಬ ಹಾಡನ್ನು ಮೆಹಬೂಸ್ ಮಸೀದಿಯ ಮುಂಭಾಗದಲ್ಲಿ ನುಡಿಸುವುದನ್ನು ನೋಡಬಹುದಾಗಿದೆ.
ಕಾರ್ಯಕ್ರಮದ ಆಯೋಜಕರಾದ ಬಿಜೆಪಿ ನಾಯಕ ಚಂದು ಪಾಟೀಲ್ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿ ಧ್ವನಿವರ್ಧಕದಲ್ಲಿ ಡಿಜೆಗಳನ್ನು ನುಡಿಸಲು ಸವಾಲು ಹಾಕಿದ್ದರು ಎನ್ನಲಾಗಿದೆ. ಆ ಸಮಯದಲ್ಲಿ ಕಲಬುರ್ಗಿ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಆದರೆ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಸಾರ್ವಜನಿಕರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಪೊಲೀಸರು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.