ಆದಿವಾಸಿ ಕೋಟೆಯ ಮೇಲೆ ಕೇಸರಿ ಧ್ವಜ ಹಾರಿಸಿದ ಸಂಘ ಪರಿವಾರ| ಸ್ಥಳದಲ್ಲಿ ಉದ್ವಿಗ್ನ!

Prasthutha|

ಜೈಪುರ: ಆದಿವಾಸಿ ಜನಾಂಗದ ಅಧೀನದಲ್ಲಿರುವ ರಾಜಸ್ಥಾನದ ಜೈಪುರದ ಕೋಟೆಯೊಂದರ ಮೇಲೆ ಸಂಘಪರಿವಾರ ಕೇಸರಿ ಧ್ವಜವನ್ನು ಹಾರಿಸಿದ್ದು, ಧ್ವಜವನ್ನು ತೆರವುಗೊಳಿಸುವ ಸಂದರ್ಭ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

- Advertisement -

18 ನೇ ಶತಮಾನದಲ್ಲಿ ನಿರ್ಮಿಸಲಾದ ಅಂಬಗಡ್ ಕೋಟೆ, ಆದಿವಾಸಿಗಳು ಮತ್ತು ಸಂಘಪರಿವಾರದ ನಡುವಿನ ಸಂಘರ್ಷದ ಕೇಂದ್ರವಾಗಿದೆ. ಸ್ಥಳೀಯ ಬಿಜೆಪಿ ಬೆಂಬಲದೊಂದಿಗೆ ಯುವ ಶಕ್ತಿ ಮೋರ್ಚಾ ಕಾರ್ಯಕರ್ತರು ಕೋಟೆಯ ಮೇಲೆ ಜೈ ಶ್ರೀರಾಮ್ ಎಂದು ಬರೆದಿರುವ ಧ್ವಜವನ್ನು ಹಾರಿಸಿದಾಗ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿದೆ.

ಅಂಬ ಮಾತೆಯ ದೇವಾಲಯವು ಕೋಟೆಯೊಳಗೆ ಇರುವುದರಿಂದ ಈ ಕೋಟೆಯು ಆದಿವಾಸಿ ಸಮುದಾಯದ ಅಧೀನದಲ್ಲಿತ್ತು. ಅಂಬ ಮಾತೆ ಆದಿವಾಸಿ ಸಮುದಾಯದ ದೇವತೆಯಾಗಿದ್ದು, ಜೈ ಶ್ರೀರಾಮ್ ಎಂದು ಬರೆದ ಧ್ವಜವನ್ನು ಹಾರಿಸುವುದರ ಮೂಲಕ ಸಂಘಪರಿವಾರದ ಕಾರ್ಯಕರ್ತರು ತಮ್ಮ ಭಾವನೆಗಳಿಗೆ ನೋವನ್ನುಂಟು ಮಾಡಿದ್ದಾರೆ ಎಂದು ಆದಿವಾಸಿಗಳು ದೂರಿದ್ದಾರೆ.

Join Whatsapp