ಕಡಬ | ಚರ್ಚ್ ಗೆ ನುಗ್ಗಿ ಶಿಲುಬೆ ಧ್ವಂಸ ಮಾಡಿದ ಸಂಘಪರಿವಾರ: ಪಾದ್ರಿಯಿಂದ ದೂರು

Prasthutha|

ಮಂಗಳೂರು: ಚರ್ಚ್ ಗೆ ನುಗ್ಗಿ ಸಂಘಪರಿವಾರದ ಕಾರ್ಯಕರ್ತರು ಶಿಲುಬೆಗೆ ಹಾನಿ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಪೇರಡ್ಕ ಬಳಿ ನಡೆದಿದ್ದು, ಘಟನೆ ಸಂಬಂಧ ಪಾದ್ರಿ ಜೋಸ್ ವರ್ಗೀಸ್ ಪೊಲೀಸರಿಗೆ ದೂರು ನೀಡಿದ್ದಾರೆ.

- Advertisement -


ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.


ಇಮ್ಯಾನುವೆಲ್ ಅಸೆಂಬ್ಲಿ ಆಫ್ ಗಾಡ್ ಹೆಸರಿನ ಕ್ರೈಸ್ತ ಪ್ರಾರ್ಥನಾ ಮಂದಿರದ ಬಾಗಿಲು ಒಡೆದು ಅಕ್ರಮ ಪ್ರವೇಶ ಮಾಡಿದ ಕಿಡಿಗೇಡಿಗಳು, ಶಿಲುಬೆಗೆ ಹಾನಿ ಮಾಡಿದ್ದಾರೆ. ನಂತರ ಸ್ಥಳದಲ್ಲಿ ಭಗವಾಧ್ವಜ ಹಾರಿಸಿ, ಹನುಮಂತನ ಫೋಟೋ ಇರಿಸಿದ್ದಾರೆ. ಪ್ರಾರ್ಥನಾ ಮಂದಿರದ ದಾಖಲೆಗಳನ್ನು ಸಂಗ್ರಹಿಸಿದ್ದ ಗೋದ್ರೇಜ್ ಬೀರುವಿಗೂ ಹಾನಿ ಮಾಡಿದ್ದಾರೆ. ಈ ಕಟ್ಟಡಕ್ಕೆ ಕಳೆದ 30 ವರ್ಷಗಳಿಂದ ತೆರಿಗೆ ಕಟ್ಟುತ್ತಿದ್ದೇವೆ. ಇದು ಅಧಿಕೃತ ಪ್ರಾರ್ಥನಾ ಮಂದಿರ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.



Join Whatsapp