ಬಂಟ್ವಾಳ | ಪೊಲೀಸ್ ಮೇಲೆಯೇ ಹಲ್ಲೆ: ಸಂಘಪರಿವಾರದ ಕಾರ್ಯಕರ್ತರಿಗೆ ನ್ಯಾಯಾಂಗ ಬಂಧನ

Prasthutha|

ಬಂಟ್ವಾಳ: ಮುಸ್ಲಿಂ ಎಂದು ಭಾವಿಸಿ ಪೊಲೀಸ್ ಸಿಬ್ಬಂದಿಗೇ ಸಂಘಪರಿವಾರದ ಕಾರ್ಯಕರ್ತರು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

- Advertisement -


ತುಂಬೆ ನಿವಾಸಿಗಳಾದ ಮನೀಶ್ ಪೂಜಾರಿ ಮತ್ತು ಮಂಜುನಾಥ್ ಆಚಾರ್ಯ ಬಂಧಿತ ಆರೋಪಿಗಳು.


ಮುಸ್ಲಿಂ ಮತ್ತು ಹಿಂದೂ ಹುಡುಗಿಯರನ್ನು ಎಲ್ಲಿಗೆ ಕರೆದುಕೊಂಡು ಹೋಗ್ತಿದ್ದೀಯಾ? ಇಲ್ಲಿನ ವಿಚಾರ ನಿನಗೆ ಗೊತ್ತಲ್ಲ ಎನ್ನುತ್ತಾ ಪೊಲೀಸ್ ಸಿಬ್ಬಂದಿಗೆ ಹಲ್ಲೆ ಮಾಡಿದ ಸಂಘಪರಿವಾರದ ಕಾರ್ಯಕರ್ತರು, ಪೊಲೀಸ್ ಸಿಬ್ಬಂದಿಯ ಪತ್ನಿ ಮೇಲೆ ಮಾನಭಂಗಕ್ಕೂ ಯತ್ನಿಸಿದೆ ಎಂಬ ಆರೋಪ ಕೇಳಿಬಂದಿದೆ.

- Advertisement -


“ಗುರುವಾರ ರಾತ್ರಿ ಪತ್ನಿ ಮತ್ತು ಪತ್ನಿಯ ಸಹೋದರಿ ಜೊತೆ ಬಿ.ಸಿ. ರೋಡ್ ವಸತಿ ಗೃಹದಲ್ಲಿ ತಂಗಿದ್ದೆ. ರಾತ್ರಿ ಊಟಕ್ಕೆಂದು ಹೊಟೆಲ್ಗೆ ಹೋಗಿ ವಾಪಸ್ ಆಗುವಾಗ ಇಬ್ಬರು ಹಿಂಬಾಲಿಸಿ ಬಂದು ನಮ್ಮನ್ನು ತಡೆದು ನಿಲ್ಲಿಸಿ ಅವಾಚ್ಯವಾಗಿ ನಿಂದಿಸಿದರು. ಮುಸ್ಲಿಂ ಮತ್ತು ಹಿಂದೂ ಹುಡುಗಿಯರನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೀಯಾ ಎಂದು ಪ್ರಶ್ನಿಸಿದರು. ಇಲ್ಲಿನ ವಿಚಾರ ನಿನಗೆ ಗೊತ್ತಲ್ಲವೇ ಎಂದು ಬೆದರಿಕೆ ಹಾಕಿ ಹಲ್ಲೆಗೆ ಮುಂದಾದರು. ನನ್ನ ಪತ್ನಿಯ ವಿಡಿಯೋ ಚಿತ್ರೀಕರಣ ಮಾಡಿ ಮಾನಭಂಗಕ್ಕೂ ಯತ್ನಿಸಿದರು” ಕುಮಾರ್ ಆರೋಪಿಸಿದ್ದಾರೆ.



Join Whatsapp