ಮಸೀದಿಗೆ ಚಪ್ಪಲಿ ಎಸೆದ ಸಂಘಪರಿವಾರದ ಕಾರ್ಯಕರ್ತ: ಇನ್ನೂ ಬಂಧಿಸದ ಪೊಲೀಸರು

Prasthutha|

ಬಳ್ಳಾರಿ: ಹಿಂದೂ ಮಹಾಸಭಾ ಗಣಪತಿ ಮೆರವಣೆ ವೇಳೆ ಸಂಘಪರಿವಾರದ ಕಾರ್ಯಕರ್ತನೋರ್ವ ಮಸೀದಿಗೆ ಚಪ್ಪಳಿ ಎಸೆದ ಘಟನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಪಟ್ಟಣದಲ್ಲಿ ನಡೆದಿದ್ದು, ಪೊಲೀಸರು ಇದುವರೆಗೂ ಯಾರನ್ನು ಬಂಧಿಸಿಲ್ಲ.

- Advertisement -

ಸೆ.10ರಂದು ಸಂಜೆ ಸಿರುಗುಪ್ಪದ ದೇಶನೂರು ರಸ್ತೆಯಲ್ಲಿರುವ ಮಸೀದಿ ಮೇಲೆ ಸಂಘಪರಿವಾರದ ಕಾರ್ಯಕರ್ತ ಚಪ್ಪಲಿ ಎಸೆದು ದುರ್ವರ್ತನೆ ತೋರಿದ್ದು, ಆತ ಮಸೀದಿಗೆ ಚಪ್ಪಲಿ ಎಸೆಯುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.


ಘಟನೆ ತಿಳಿಯುತ್ತಿದ್ದಂತೆಯೇ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈವರೆಗೂ ಯಾರನ್ನು ಬಂಧಿಸಿಲ್ಲ, ಆದರೆ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.



Join Whatsapp