ಬಿಜೆಪಿ ಮಹಿಳಾ ಮೋರ್ಚಾ ನಾಯಕಿ ಆತ್ಮಹತ್ಯೆ ಪ್ರಕರಣ: ಬಿಜೆಪಿ ಕಾರ್ಯಕರ್ತ ಪರಾರಿ

Prasthutha|

►ಡೆತ್ ನೋಟಲ್ಲಿ ಸಂಘದ ಸದಸ್ಯ ಪ್ರಜೀವ್ ಹೆಸರು ಬಯಲು

- Advertisement -

ಪಾಲಕ್ಕಾಡ್: ಬಿಜೆಪಿ ಮಹಿಳಾ ಮೋರ್ಚಾ ನಾಯಕಿ ಶರಣ್ಯ ಆತ್ಮಹತ್ಯೆ ಪ್ರಕರಣದ ಪ್ರಧಾನ ಆರೋಪಿಯಾಗಿರುವ ಬಿಜೆಪಿ ಮುಖಂಡ ಪ್ರಜೀವ್ ಪರಾರಿಯಾಗಿದ್ದಾನೆ. ಆತನ ಪ್ರಜೀವ್ ಫೋನ್ ಸ್ವಿಚ್ ಆಫ್ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತನಿಖಾ ತಂಡವು ಶರಣ್ಯ ಅವರ ಕುಟುಂಬ ಸದಸ್ಯರ ಹೇಳಿಕೆಗಳನ್ನು ತೆಗೆದುಕೊಂಡು ಮುಂದಿನ ಕ್ರಮ ಕೈಗೊಳ್ಳಲಿದೆ. ಶರಣ್ಯ ಅವರ ಫೋನ್ ಕಸ್ಟಡಿಯಲ್ಲಿದೆ. ಫೋನ್ ವಿವರಗಳೂ ತನಿಖೆ ನಡೆಯುತ್ತಿದೆ.

- Advertisement -

ಬಿಜೆಪಿ ಮಹಿಳಾ ಮೋರ್ಚಾದ ಪಾಲಕ್ಕಾಡ್ ಕ್ಷೇತ್ರದ ಖಜಾಂಚಿ ಶರಣ್ಯ ಭಾನುವಾರ ತಮ್ಮ ಮನೆಯ ಮಲಗುವ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸ್ಥಳದಲ್ಲಿ ಶೋಧ ನಡೆಸಿದಾಗ ಆತ್ಮಹತ್ಯೆ ಪತ್ರ ಪತ್ತೆಯಾಗಿದೆ. ಶರಣ್ಯ ಅವರ ಆತ್ಮಹತ್ಯೆಗೆ ಬಿಜೆಪಿ ಕಾರ್ಯಕರ್ತ ಪ್ರಜೀವ್ ಕಾರಣ ಎಂದು ಸಾಬೀತುಪಡಿಸುವ ಮಾಹಿತಿ ಅದರಲ್ಲಿ ಇತ್ತು. 

ನಾನು ಪ್ರಜೀವ್ ನನ್ನು ನಂಬಿದೆ ಮತ್ತು ಅನೇಕ ಕೆಲಸಗಳನ್ನು ಮಾಡಿದೆ. ತಾನು ಮೋಸ ಹೋಗಿದ್ದೇನೆಂದು ಈಗ ಅರಿತುಕೊಂಡಿದ್ದೇನೆ ಎಂದು ಅಸಮಾಧಾನಗೊಂಡಿದ್ದರಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೇನೆ. ನನ್ನ ಸಾವಿನಲ್ಲಿ ಬೇರೆ ಯಾರೂ ಭಾಗಿಯಾಗಿಲ್ಲ. ಪ್ರಜೀವ್ ಅವರನ್ನು ಬಿಡಬಾರದು ಮತ್ತು ಅವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಶರಣ್ಯ ಬರೆದಿದ್ದರು.



Join Whatsapp