ರಕ್ತದಲ್ಲಿ ಪತ್ರ ಬರೆದು ಪ್ರತಿಭಟಿಸಿದ ಶ್ರೀಗಂಧ ಬೆಳೆಗಾರರು; ಹೈಕೋರ್ಟ್ ನಿರ್ದೇಶನದಂತೆ ಪರಿಹಾರ ನೀಡಲು ಒತ್ತಾಯ

Prasthutha|

ಚಿಕ್ಕಮಗಳೂರು: ಶ್ರೀಗಂಧದ ಬೆಳೆಗಾರರು ರಕ್ತದಲ್ಲಿ ಪತ್ರ ಬರೆದು ಪ್ರತಿಭಟನೆ ನಡೆಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಹಳಿಯೂರು ಗ್ರಾಮದಲ್ಲಿ ನಡೆದಿದೆ.

- Advertisement -

62 ಕೋಟಿ ರೂ. ಪರಿಹಾರ ಕೊಡಬೇಕಾದ ಜಾಗಕ್ಕೆ ಕೇವಲ  ಎರಡೂವರೆ ಲಕ್ಷ ನೀಡಿದ ಸರ್ಕಾರದ ಕ್ರಮವನ್ನು ಖಂಡಿಸಿ ಈ ಪ್ರತಿಭಟನೆ ನಡೆದಿದೆ.

ಒಂದು ತಿಂಗಳಿನಿಂದ ಅರೆಬೆತ್ತಲೆ ಪ್ರತಿಭಟನೆ ನಡೆಸುತ್ತಿರುವ  ಪ್ರತಿಭಟನಾಕಾರರು ಸಿರಿಂಜ್ ನಲ್ಲಿ ರಕ್ತ ತೆಗೆದು ಸರ್ಕಾರಕ್ಕೆ ಪತ್ರ ಬರೆದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.

- Advertisement -

ಹೆದ್ದಾರಿ ಅಗಲೀಕರಣದ ವೇಳೆ ಬೆಳೆಗಾರರು ಜಮೀನು ಕಳೆದುಕೊಳ್ಳಲಿದ್ದು, 22 ರೈತರಿಗೆ 62 ಕೋಟಿ ಪರಿಹಾರ ಬರಬೇಕಾಗಿದೆ. ಆದರೆ ಎರಡೂವರೆ ಲಕ್ಷ ರೂ ಮಾತ್ರ ಪರಿಹಾರ ನೀಡಲು ಸರ್ಕಾರ ಮುಂದಾಗಿದ್ದು, ಹೈಕೋರ್ಟ್ ನಿರ್ದೇಶನದಂತೆ ಪರಿಹಾರ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.



Join Whatsapp