‘ಸನಾತನ ಧರ್ಮದ ವ್ಯಕ್ತಿ ಬ್ರಿಟನ್ ಪ್ರಧಾನಿ’ ಎಂದು ಬೀಗಿದ ಸಂಘಪರಿವಾರ: ಗೋಮಾಂಸದ ಖಾದ್ಯದೊಂದಿಗೆ ಪೋಸು ಕೊಟ್ಟ ಸುನಾಕ್ ಫೋಟೋ ವೈರಲ್

Prasthutha|

ನವದೆಹಲಿ: ರಿಷಿ ಸುನಾಕ್ ಬ್ರಿಟನ್ ಪ್ರಧಾನಿಯಾದರು ಎಂದು ಘೋಷಣೆಯಾಗುತ್ತಿದ್ದಂತೆ, ಸುನಾಕ್ ಜಾತಿಯನ್ನು ಎಳೆದು ತಂದ ಸಂಘಪರಿವಾರ, ಬಲಪಂಥೀಯ ವ್ಯಕ್ತಿಯೊಬ್ಬ ಬ್ರಿಟನ್ ಪ್ರಧಾನಿಯಾಗಿದ್ದು ನಮ್ಮ ಹೆಮ್ಮೆ ಎಂದು ಬೀಗಿತ್ತು. ಈ ಮಧ್ಯೆ ಗೋಮಾಂಸ ಪರವಾಗಿರುವ ರಿಷಿ ಸುನಾಕ್ ಟ್ವೀಟ್ ಮತ್ತು ಗೋಮಾಂಸದ ಖಾದ್ಯದೊಂದಿಗೆ ತೆಗೆಸಿಕೊಂಡ ಅವರ ಫೋಟೋ ಮುನ್ನೆಲೆಗೆ ಬಂದಿದ್ದು, ಸಂಘಪರಿವಾರದ ಕಾರ್ಯಕರ್ತರಿಗೆ ತೀವ್ರ ಹಿನ್ನಡೆಯಾಗಿದೆ.

- Advertisement -

ದನದೊಂದಿಗೆ ರಿಷಿ ಈ ಹಿಂದೆ ತೆಗೆಸಿಕೊಂಡ ಚಿತ್ರವನ್ನು ಹಂಚಿಕೊಂಡು, ಗೋ ಪ್ರೇಮಿ ಬ್ರಿಟನಿನ ಪ್ರದಾನಿಯಾದರು. ವಿಶ್ವದ ಎಡಚರರ ಬುಡಕ್ಕೆ ಬೆಂಕಿ ಬದ್ದಿದೆ. ಬ್ರಿಟನ್ ನಲ್ಲೂ ಗೋ ಮಾಂಸ ನಿಷೇಧವಾಗಲಿ ಎಂದು ಸಂಘಪರಿವಾರದ ಕಾರ್ಯಕರ್ತರು ಪೋಸ್ಟ್ ಮಾಡಿದ್ದರು. ಈ ವೇಳೆ ರಿಷಿ ಸುನಾಕ್, ಇದೇ ವರ್ಷ ಜುಲೈ 30ರಂದು ಗೋ ಮಾಂಸ ಭಕ್ಷಣೆಯ ಕುರಿತಾಗಿ ಮಾಡಿದ ಟ್ವೀಟ್ ವೈರಲ್ ಆಗಿದ್ದು, ರಿಷಿ ಸುನಕ್ ಇಂಗ್ಲೆಂಡ್ ಪ್ರಧಾನಿಯಾಗುತ್ತಿರುವುದಕ್ಕೆ ಧರ್ಮದ ಆಧಾರದಲ್ಲಿ ಸಂಭ್ರಮಪಡುತ್ತಿರುವ ಹಿಂದುತ್ವವಾದಿಗಳು ಮತ್ತು ಬಲಪಂಥೀಯರಿಗೆ ತೀವ್ರ ಮುಜುಗರ ಉಂಟಾಗಿದೆ.

ನನ್ನ ಕ್ಷೇತ್ರವು ನೂರಾರು ಗೋಮಾಂಸ ಮತ್ತು ಕುರಿಮಾಂಸ ಉದ್ಯಮದ ನೆಲೆಯಾಗಿದೆ. ಈ ಭಾಗದ ರೈತರು ಪ್ರತಿನಿಧಿಸುವ ಅದ್ಭುತ ಉದ್ಯಮವನ್ನು ಬೆಂಬಲಿಸಲು ನಾನು ಬದ್ಧನಾಗಿದ್ದೇನೆ. ಜನರ ಆಹಾರದ ಆಯ್ಕೆಗಳು ತಮ್ಮದೇ ಆಗಿರುತ್ತವೆ. ದೇಶ ಮತ್ತು ವಿದೇಶಗಳಲ್ಲಿ ನಮ್ಮ ಜಾನುವಾರು ರೈತರನ್ನು ಬೆಂಬಲಿಸುವ ಸರ್ಕಾರವನ್ನು ನಾನು ಮುನ್ನಡೆಸುತ್ತೇನೆ ಎಂದು ಜುಲೈ 30ರಂದು ಮಾಡಿದ ಟ್ವೀಟ್ ಇದೀಗ ಮುನ್ನೆಲೆಗೆ ಬಂದಿದ್ದು, ಎಡಪಂಥೀಯರನ್ನು ಕೆಣಕಲು ಮುಂದಾದ ಹಿಂದುತ್ವವಾದಿಗಳಿಗೆ ತೀವ್ರ ತಿರುಗೇಟು ಬಿದ್ದಿದೆ. ಇದರ ಜೊತೆಯಲ್ಲಿ ರಿಷಿ ಸುನಕ್ ದನದ ಮಾಂಸದ ಖಾದ್ಯಗಳೊಂದಿಗೆ ಪೋಸು ಕೊಟ್ಟಿರುವ ಫೊಟೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

- Advertisement -

ರಿಷಿ ಸುನಕ್ ತಮ್ಮ ಪತ್ನಿಯೊಂದಿಗೆ ಗೋಪೂಜೆ ಮಾಡುತ್ತ, ಭಾರತದ ಬಲಪಂಥೀಯರನ್ನು ಓಲೈಸಿದ್ದರು ಈ ಕಾರಣಕ್ಕಾಗಿ ಮಾತ್ರ ಬಲಪಂಥೀಯರು ಅವರ ಚಿತ್ರವನ್ನು ಹಂಚಿ ನಮಗೆ ಇದು ಹೆಮ್ಮೆಯ ಸಮಯ ಎಂದೆಲ್ಲಾ ಪೋಸ್ಟ್ ಮಾಡುತ್ತಿದ್ದಾರೆ. ಆದರೆ ರಿಷಿ ದನದ ಮಾಂಸ ತಿನ್ನುವ ಚಿತ್ರಗಳೆಲ್ಲಾ ವೈರಲ್ ಆಗುತ್ತಿದ್ದು, ಸದ್ಯ ಈಗ ಇದು ಸಂಘಪರಿವಾರಕ್ಕೆ ನುಂಗಲಾರದ ತುತ್ತಾಗಿದೆ.



Join Whatsapp