ಸಚಿವ ನವಾಬ್ ಮಲಿಕ್ ವಿರುದ್ಧ ಮಾನನಷ್ಟ ಮೊಕದ್ದಮೆ: ಸಮೀರ್ ವಾಂಖೆಡೆ ತಂದೆ ನಿರ್ಧಾರ

Prasthutha|

ಮುಂಬೈ: ಡ್ರಗ್ಸ್ ಪ್ರಕರಣ ಭೇದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎನ್.ಸಿ.ಬಿ ನಿರ್ದೇಶಕ ಸಮೀರ್ ವಾಂಖೆಡೆ ಅವರ ತಂದೆ ಜ್ಞಾನದೇವ್ ವಾಂಖೆಡೆ, ಮಹಾರಾಷ್ಟ್ರ ಸಚಿವ ಮತ್ತು ಎನ್.ಸಿ.ಪಿ ಮುಖಂಡ ನವಾಬ್ ಮಲಿಕ್ ವಿರುದ್ಧ ಬಾಂಬೆ ಹೈಕೋರ್ಟ್ ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

- Advertisement -

ಇಂದು ಬೆಳಗ್ಗೆ ನಡೆದ ಸುದ್ದಿಗೋಷ್ಠಿಯಲ್ಲಿ ನವಾಬ್ ಮಲಿಕ್, ಮೋಹಿತ್ ಕಾಂಬೋಜ್ ಅವರ ಸಹಕಾರದೊಂದಿಗೆ ಸಮೀರ್ ವಾಂಖೆಡೆ ಅವರು ಡ್ರಗ್ಸ್ ಪ್ರಕರಣದ ಆರೋಪಿ ಆರ್ಯನ್ ಖಾನ್ ನನ್ನು ಅಪಹರಿಸಿದ ನಂತರ ಸುಲಿಗೆ ಸಂಚು ರೂಪಿಸಿದ್ದರು ಎಂಬ ಗಂಭೀರ ಅರೋಪ ಹೊರಿಸಿದ್ದರು.

ಮಾತ್ರವಲ್ಲ ಈ ಹಿಂದೆ ಮುಸ್ಲಿಮ್ ಆಗಿ ಜನಿಸಿದ ಸಮೀರ್, ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ಎಸ್.ಸಿ ಕೋಟಾದಡಿಯಲ್ಲಿ ನೇಮಕಾತಿ ಪಡೆಯಲು ನಕಲಿ ಪ್ರಮಾಣಪತ್ರ, ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎಂದು ನವಾಬ್ ಮಲಿಕ್ ಆರೋಪಿಸಿದ್ದರು.

- Advertisement -

ಎನ್.ಸಿ.ಬಿ ತಂಡ ಅಕ್ಟೋಬರ್ 2 ರಂದು ಕ್ರೂಸ್ ಹಡಗಿನಲ್ಲಿ ಡ್ರಗ್ಸ್ ಪಾರ್ಟಿಯನ್ನು ಪತ್ತೆಹಚ್ಚಿತ್ತು. ಈ ಪ್ರಕರಣದಲ್ಲಿ ಆರ್ಯನ್ ಖಾನ್, ನೈಜೀರಿಯನ್ ಪ್ರಜೆಗಳನ್ನು ಒಳಗೊಂಡಂತೆ ಒಟ್ಟು 20 ಮಂದಿ ಬಂಧಿಸಿತ್ತು.



Join Whatsapp