ಲಕ್ನೋ: ಸಮಾಜವಾದಿ (ಎಸ್ಪಿ) ಪಕ್ಷದ ನಿತಿನ್ ಅಗರ್ವಾಲ್ ಅವರು ಬಿಜೆಪಿ ಬೆಂಬಲದೊಂದಿಗೆ ಇಂದು ಉತ್ತರ ಪ್ರದೇಶದ ವಿಧಾನಸಭೆಯ ಉಪ ಸ್ಪೀಕರ್ ಆಗಿ ಆಯ್ಕೆಯಾದರು.
ಆಡಳಿತರೂಢ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವ ಉತ್ತರ ಪ್ರದೇಶದ ಪ್ರತಿಪಕ್ಷ ಸ್ಥಾನವನ್ನು ಅಲಂಕರಿಸಿದ ಸಮಾಜವಾದಿ ಪಕ್ಷದ ನಾಯಕ ನಿತಿನ್ ಅಗರ್ವಾಲ್ ಅವರು ಉಪ ಸ್ಪೀಕರ್ ಆಗಿ ಆಯ್ಕೆಯಾದರು.
ಪ್ರಸಕ್ತ ಉಪ ಸ್ಪೀಕರ್ ಆಗಿ ಆಯ್ಕೆಯಾದ ನಿತಿನ್ ಅವರನ್ನು ಮುಖ್ಯಮಂತ್ರಿ ಆದಿತ್ಯನಾಥ್ ಅಭಿನಂದನೆ ಸಲ್ಲಿಸಿದರು.
ಸಮಾಜವಾದಿ ಪಕ್ಷದ ನಿತಿನ್ ಅಗರ್ವಾಲ್ ಉಪ ಸ್ಪೀಕರ್ ಆಗಿ ಆಯ್ಕೆ ಆಗುತ್ತಿದ್ದಂತೆ ಬಿಜೆಪಿ ಶಾಸಕರು ಜೈಶ್ರೀರಾಮ್ ಘೋಷನೆ ಕೂಗಿ ಹರ್ಷ ವ್ಯಕ್ತಪಡಿಸಿದರು.