ಸಲ್ಮಾನ್ ಖಾನ್ ಧರಿಸಿದ ವಾಚಿನಲ್ಲಿ 714 ವಜ್ರಗಳು: ಇದರ ಬೆಲೆ ಎಷ್ಟು?

Prasthutha|

ಬಾಲಿವುಡ್ ನ ಖ್ಯಾತ ನಟರಾಗಿರುವ ಸಲ್ಮಾನ್ ಖಾನ್ ಸಿನಿಮಾದ ಜೊತೆಗೆ ಬ್ಯುಸಿನೆಸ್ ಮೂಲಕವೂ ಸಂಪಾದಿಸುತ್ತಾರೆ.

- Advertisement -


ಸಲ್ಮಾನ್ ಖಾನ್ ಇತ್ತೀಚೆಗೆ ಭಾರೀ ದುಬಾರಿ ವಾಚೊಂದನ್ನು ಧರಿಸಿರುವುದು ಕಂಡು ಬಂತು. ಈ ವಾಚ್ ಅಂತಿಂಥಾ ವಾಚ್ ಅಲ್ಲವೇ ಅಲ್ಲ. ಬದಲಾಗಿ ಬರೋಬ್ಬರಿ 700ಕ್ಕೂ ಹೆಚ್ಚು ವಜ್ರಗಳನ್ನು ಪೋಣಿಸಲಾಗಿರುವ ವಾಚ್ ಇದಾಗಿದ್ದು, ಈ ವಜ್ರಖಚಿತ ಕೈಗಡಿಯಾರದ ಬೆಲೆಯ ಬಗ್ಗೆ ನೆಟ್ಟಿಗರಲ್ಲಿ ಕುತೂಹಲ ಮೂಡಿದೆ.


ಲಕ್ಷುರಿ ಜ್ಯುವೆಲ್ಲರಿ ಹಾಗೂ ವಾಚ್ ಬ್ರ್ಯಾಂಡ್ ಜಾಕಬ್ ಶ್ರೀ ಕಂಪನಿ ಸಂಸ್ಥಾಪಕ ಜಾಕಬ್ ಅರಬೊ ಅವರು ಇನ್ಸ್ಟಾಗ್ರಾಮ್ ನಲ್ಲಿ ಒಂದು ವಿಡಿಯೋ ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ನಟ ಸಲ್ಮಾನ್ ಖಾನ್ ಅವರು ವಜ್ರಗಳನ್ನು ಪೋಣಿಸಲಾಗಿರುವ ಬಿಲಿಯನೇರ್ 3 ವಾಚ್ ಧರಿಸಿದ್ದನ್ನು ಕಾಣಬಹುದಾಗಿದೆ.

- Advertisement -


ಜಾಕೋಬ್ & ಕೋ ವೆಬ್ ಸೈಟ್ ವಾಚ್ 152 ವೈಟ್ ಗ್ರೀನ್-ಕಟ್ ವಜ್ರಗಳ ಒಳಗಿನ ಉಂಗುರವನ್ನು ಹೊಂದಿದೆ ಎಂದು ಹೇಳಿದೆ.


ಪ್ರತಿ ವಿಭಾಗದಲ್ಲಿ 76 ವಜ್ರಗಳಿವೆ. ವಾಚ್ ಚೈನ್ ಭಾಗವನ್ನು 504 ವೈಟ್ ಗ್ರೀನ್-ಕಟ್ ವಜ್ರಗಳಿಂದ ಅಲಂಕರಿಸಲಾಗಿದೆ. 57 ಬ್ಯಾಗೆಟ್-ಕಟ್ ವಜ್ರಗಳನ್ನು ಬಳಸಿ ಚೈನ್ ಅಲಂಕರಿಸಲಾಗಿದೆ. ಒಟ್ಟು ಇದರಲ್ಲಿ 714 ವಜ್ರಗಳನ್ನು ಪೋಣಿಸಲಾಗಿದೆ. ವೆಬ್ ಸೈಟ್ ಪ್ರಕಾರ ಈ ವಾಚ್ ಬೆಲೆ ಬರೋಬ್ಬರಿ 41.98 ಕೋಟಿ ರೂಪಾಯಿ ಇದೆ. ಈ ವಾಚ್ ಮಾರಿದರೆ ಏನಿಲ್ಲವೆಂದರೂ 5 ರೋಲ್ಸ್ ರಾಯ್ಸ್ ಬರುತ್ತದೆ ಎಂದು ಅನೇಕರು ಹೇಳಿದ್ದಾರೆ.



Join Whatsapp