ನಾನು ಇರೋವರೆಗೂ ಅವರನ್ನು ಏನೂ ಮಾಡೋಕೆ ಆಗಲ್ಲ: ಬಿಷ್ಣೋಯ್ ಟೀಮ್‌ಗೆ ಸಲ್ಮಾನ್ ಖಾನ್‌ ಬಾಡಿಗಾರ್ಡ್‌ ಶೇರಾ ಸವಾಲು

Prasthutha|

29 ವರ್ಷಗಳಿಂದ ಸಲ್ಮಾನ್‌ ಖಾನ್‌ಗೆ ಬಾಡಿಗಾರ್ಡ್‌ ಆಗಿರುವ ಶೇರಾ

- Advertisement -

ಮುಂಬೈ: ಮಹಾರಾಷ್ಟ್ರ ಮಾಜಿ ಸಚಿವ ಬಾಬಾ ಸಿದ್ದಿಕ್‌ ಹತ್ಯೆ ನಂತರ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಈ ನಡುವೆ ಸಲ್ಮಾನ್‌ ಖಾನ್‌ ಬಾಡಿಗಾರ್ಡ್‌ ಶೇರಾ, ನಾನು ಇರುವವರೆಗೂ ನಮ್ಮ ಬಾಸ್‌ ರಕ್ಷಣೆ ನನ್ನದು ಎಂದು ಹೇಳಿಕೊಂಡಿದ್ದಾರೆ.

- Advertisement -

ನಾನು ಇರುವರೆಗೂ ನಮ್ಮ ಭಾಯ್‌ಗೆ ಏನೂ ಆಗುವುದಿಲ್ಲ. ಅವರನ್ನು ಕಾಪಾಡುವ ಜವಾಬ್ದಾರಿ ನನ್ನದು ಎಂದು ಲಾರೆನ್ಸ್‌ ಬಿಷ್ಣೋಯ್‌ ಟೀಮ್‌ಗೆ ಚಾಲೆಂಜ್‌ ಮಾಡಿದ್ದಾರೆ.

ಸಲ್ಮಾನ್‌ ಖಾನ್‌ಗೆ ಶೇರಾ ಮಾತ್ರವಲ್ಲ ಅನೇಕ ಬಾಡಿಗಾರ್ಡ್‌ಗಳಿದ್ದಾರೆ. ಅವರಲ್ಲಿ ಶೇರಾ ಪ್ರಮುಖವಾದವರು.

ಇವರು ಹೆಸರಿಗೆ ತಕ್ಕಂತೆ ಶೇರ್‌ನಂತೆ ಇದ್ದಾರೆ. ಅಜಾನುಬಾಹು ಶೇರಾಗೆ ಸೋಷಿಯಲ್‌ ಮೀಡಿಯಾದಲ್ಲಿ ಕೂಡಾ ಸಾಕಷ್ಟು ಫಾಲೋವರ್‌ಗಳಿದ್ದಾರೆ.

ಇವರ ನಿಜ ಹೆಸರು ಗುರ್ಮೀತ್ ಸಿಂಗ್ ಜಾಲಿ. 1995 ರಲ್ಲಿ ಸಲ್ಮಾನ್ ಅವರ ಅಂಗರಕ್ಷಕರಾಗಿ ಶೇರಾ ನೇಮಕಗೊಂಡರು. ಟೈಗರ್ ಸೆಕ್ಯುರಿಟಿ ಎಂಬ ಹೆಸರಿನ ತಮ್ಮದೇ ಆದ ಭದ್ರತಾ ಕಂಪನಿಯನ್ನು ಶೇರಾ ನಡೆಸುತ್ತಿದ್ದಾರೆ.

ಶೇರಾ, ಸಲ್ಮಾನ್ ಖಾನ್‌ಗೆ ಅಂಗರಕ್ಷಕ ಆಗಿ ಮಾತ್ರವಲ್ಲ, ಒಡಹುಟ್ಟಿದ ಸಹೋದರನಂತೆ ಇದ್ದಾರೆ. ಸಲ್ಮಾನ್ ಖಾನ್ ಅವರನ್ನು ಸೋಹೈಲ್ ಖಾನ್ ಮೂಲಕ ಕಾರ್ಯಕ್ರಮವೊಂದರಲ್ಲಿ ಭೇಟಿಯಾದೆ. ಸ್ಟೇಜ್ ಶೋ ಒಂದರಲ್ಲಿ ಸಮಸ್ಯೆ ಇದ್ದ ಕಾರಣ ಸೊಹೈಲ್ ಖಾನ್‌, ಸಹೋದರ ಸಲ್ಮಾನ್‌ ಖಾನ್‌ಗೆ ಭದ್ರತೆ ನೀಡುವಂತೆ ಮನವಿ ಮಾಡಿದ್ದರು. ನಂತರ ನೀನು ಸಲ್ಮಾನ್ ಭಾಯ್ ಜೊತೆ ಯಾಕೆ ಇರಬಾರದು?’ ಎಂದು ಕೇಳಿದರು. ನಾನೂ ಒಪ್ಪಿಕೊಂಡೆ. ಆರಂಭದಲ್ಲಿ, ನಾನು ಅವರೊಂದಿಗೆ ಹೊರಗೆ ಕಾರ್ಯಕ್ರಮಗಳಿಗೆ ಮಾತ್ರ ಹೋಗಿ ಬರುತ್ತಿದ್ದೆ. ಆದರೆ ಈಗ ಆ ರೀತಿ ಅಲ್ಲ, ಅವರೊಂದಿಗೆ ನಾನು ಸದಾ ಇರುತ್ತೇನೆ. ನನಗೆ ಅವರು ಸ್ವಂತ ಅಣ್ಣನಿಗಿಂತಲೂ ಹೆಚ್ಚು ಎಂದು ಶೇರಾ ಹೇಳಿಕೊಂಡಿದ್ದಾರೆ.



Join Whatsapp