ರೈತ ಹೋರಾಟದ ಬಗ್ಗೆ ನಟ ಸಲ್ಮಾನ್ ಖಾನ್ ಏನು ಹೇಳಿದ್ದಾರೆ ಗೊತ್ತಾ? | ಇಲ್ಲಿದೆ ನೋಡಿ ವಿವರ

Prasthutha|

ನವದೆಹಲಿ : ಬಿಜೆಪಿ ಸರಕಾರದ ನೂತನ ಕೃಷಿ ಕಾನೂನುಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಕುರಿತಂತೆ ನಟ ಸಲ್ಮಾನ್ ಖಾನ್ ಮಾರ್ಮಿಕವಾಗಿ ಉತ್ತರಿಸಿ, ವಿವಾದದಿಂದ ತಪ್ಪಿಸಿಕೊಂಡಿದ್ದಾರೆ.

- Advertisement -

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಅವರು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, “ರೈತರಿಗೆ ಸರಿಯಾದುದನ್ನೇ ಮಾಡಬೇಕು, ಸಮರ್ಪಕವಾದುದನ್ನೇ ಮಾಡಬೇಕು, ಪ್ರತಿಯೊಬ್ಬ ರೈತನಿಗೂ ಸರಿಯಾದುದನ್ನೇ ಮಾಡಬೇಕು” ಎಂದು ಹೇಳಿದ್ದಾರೆ. ಈ ಮೂಲಕ ತಮ್ಮ ನಿಲುವು ಏನು ಎಂಬುದನ್ನು ಸ್ಪಷ್ಟವಾಗಿ ತಿಳಿಸಲು ಅವರು ಹಿಂದೇಟು ಹಾಕಿದ್ದಾರೆ.

ಆ ಮೂಲಕ ಬಿಜೆಪಿಗರ ಟ್ರೋಲ್ ಪಡೆಯಿಂದ, ವಾಗ್ದಾಳಿಗೊಳಗಾಗುವುದರಿಂದ ತಪ್ಪಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳು ಭಾರತದ ರೈತ ಹೋರಾಟವನ್ನು ಬೆಂಬಲಿಸಿದ ಬೆನ್ನಲ್ಲೇ, ಭಾರತದ ಕೆಲವು ಸೆಲೆಬ್ರಿಟಿಗಳು ಬಿಜೆಪಿ ಸರಕಾರದ ಪರವಾಗಿ ನಿಂತು ಟ್ವೀಟ್ ಗಳನ್ನು ಮಾಡಿ ಬಿಜೆಪಿಗರಿಂದ ಮೆಚ್ಚುಗೆ ಪಡೆದಿದ್ದರು. ಆದರೆ, ಇದೇ ವೇಳೆ ರೈತ ಹೋರಾಟಗಾರರು ಮತ್ತು ಬೆಂಬಲಿಗರಿಂದ ದೊಡ್ಡ ಮಟ್ಟದಲ್ಲಿ ಛೀಮಾರಿ ಹಾಕಿಸಿಕೊಂಡಿದ್ದಾರೆ.  

Join Whatsapp